ಮಂಡ್ಯದ ಹಳೇ ನಗರದಲ್ಲಿರುವ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸುಮಲತಾ ಅಂಬರೀಷ್ ಪ್ರಚಾರ ಆರಂಭಿಸಿದ್ದಾರೆ. ಮಂಡ್ಯ ನಗರದ ಎಲ್ಲ ವಾರ್ಡ್ಗಳಲ್ಲೂ ರಾತ್ರಿ ಒಂಬತ್ತು ಗಂಟೆವರೆಗೆ ಸುಮಲತಾ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಎಲ್ಲ ವಾರ್ಡ್ಗಳ ದೇವಾಲಯಗಳಿಗೂ ಪೂಜೆ ಸಲ್ಲಿಸಲಿದ್ದಾರೆ. ವರಿಷ್ಠರ ಮಾತಿಗೆ ಕ್ಯಾರೆ ಎನ್ನದ ಮಂಡ್ಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸುಮಲತಾ ಪರ ಬಹಿರಂಗ ಪ್ರಚಾರಕ್ಕೆಇಳಿದಿರುವುದು ದೋಸ್ತಿಗಳ ನಿದ್ದೆ ಕೆಡಿಸಿದೆ.
ಮಂಡ್ಯ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಅರವಿಂದ್, ನಗರಸಭಾ ಮಾಜಿ ಸದಸ್ಯ ಅನೀಲ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.