ಪ್ರಖ್ಯಾತ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಡ್ಯದ ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ವೈರಮುಡಿ ಹೊರಟಿದೆ. ಎಸ್ಪಿ ಮಂಜುಶ್ರೀ, ಎಸ್ಪಿ ಶಿವಪ್ರಕಾಶ್ ದೇವರಾಜ್ ಹಾಗೂ ದೇವಾಲಯದ ಸ್ಥಾನಿಕರ ಸಮ್ಮುಖದಲ್ಲಿ ಖಜಾನೆಯಿಂದ ವೈರಮುಡಿಯನ್ನು ಹೊರ ತೆಗೆದು ಪರಿಶೀಲನೆ ನಡೆಸಲಾಗಿದೆ. ವೈರಮುಡಿ ಕಿರೀಟದೊಂದಿಗೆ ಕೃಷ್ಣರಾಜಮುಡಿ ಕಿರೀಟ ಹಾಗೂ ವಿವಿಧ ಆಭರಣಗಳನ್ನೂ ಮೇಲುಕೋಟೆಗೆ ರವಾನಿಸಲಾಗಿದೆ.
ಜಿಲ್ಲಾ ಖಜಾನೆಯಲ್ಲಿ ಜಿಲ್ಲಾಡಳಿತದಿಂದ ಪೂಜೆ ಸಲ್ಲಿಸಿ ಬಳಿಕ ಲಕ್ಷ್ಮೀಜನಾರ್ದನ ದೇವಾಲಯದಲ್ಲೂ ಪೂಜೆ ಸಲ್ಲಿಸಲಾಗುತ್ತದೆ. ಶ್ರೀರಂಗಪಟ್ಟಣ, ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ಕಿರೀಟ ವನ್ನು ಕೊಂಡೊಯ್ಯಲಾಗುತ್ತದೆ. ಕಿರೀಟ ಹೋಗುವ ಹಾದಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.