Monday, January 18, 2021
Home ಜಿಲ್ಲೆ ಕೊಪ್ಪಳ ಕರಡಿ – ಟಗರು ಕಾಳಗ ಜಸ್ಟ್ ಮಿಸ್

ಇದೀಗ ಬಂದ ಸುದ್ದಿ

ಕರಡಿ – ಟಗರು ಕಾಳಗ ಜಸ್ಟ್ ಮಿಸ್

ಕೊಪ್ಪಳ ಮಾ 17 :  ಕೊಪ್ಪಳದಿಂದ ಸ್ಪರ್ಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆ. ಲೋಕಸಭೆಗೆ ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿಯವರಿಗೆ ಟಿಕೆಟ್ ಸಿಗುವ  ಸಾಧ್ಯತೆ ಬಹುತೇಕ ಖಾತರಿಯಾಗಿದ್ದು  ಇವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಷಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆದರೆ ಮಾಜಿ ಸಿ ಎಂ ಸಿದ್ದರಾಮಯ್ಯ ಅವರು  ಕೊಪ್ಪಳ ಲೋಕಸಭೆಯಿಂದ ಸ್ಪರ್ದಿಸುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರು ಕೊಪ್ಪಳದಿಂದ ಸ್ಪರ್ದಿಸಬೇಕೆನ್ನುವುದು ಕೊಪ್ಪಳ ಕಾಂಗ್ರೆಸ್ ಕಾರ್ಯಕರ್ತರ  ಒತ್ತಾಯವಿದೆ.  ಸಿದ್ದರಾಮಯ್ಯನವರು  ಕೊಪ್ಪಳದಿಂದ ಸ್ಪರ್ದಿಸಿದರೆ ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಬಹುದು, ಈ ಎಲ್ಲಾ ಲೆಕ್ಕಾಚಾರದಿಂದ  ಸಿದ್ದರಾಮಯ್ಯನವರ ಸ್ಪರ್ಧೆಗೆ ಕಾರ್ಯಕರ್ತರ  ಒತ್ತಡವಿದ್ದರೂ ಸಿದ್ದರಾಮಯ್ಯನವರು  ಇಲ್ಲಿ ಸ್ಪರ್ದಿಸುವುದಿಲ್ಲ ಅವರ ಬದಲಿಗೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಲಾಗುವುದು ಎಂದು ತಂಗಡಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೀಗಾಗಿ ಕೊಪ್ಪಳದಲ್ಲಿ ಕರಡಿ ವರ್ಸೆಸ್ ಟಗರು ಕಾಳಗ ನಡೆಯುವ ಸಾಧ್ಯತೆ ಕಮರಿ ಹೋಗಿದೆ.

ಕೊಪ್ಪಳದಿಂದ ಮಗ ರಾಜಶೇಖರ್ ಹಿಟ್ನಾಳ್ ಗೆ ಟಿಕೆಟ್ ಕೊಡಿಸಲು ಸಿದ್ದು ಪರಮಾಪ್ತ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ್ ಹಿಟ್ನಾಳ್ ಓಡಾಡುತ್ತಿದ್ದಾರೆ. ಆದರೆ ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಿರುವ ಮಾಜಿ ಸಚಿವ ಹಿರಿಯ ರಾಜಕಾರಣಿ ಬಡವರಾಜ ರಾಯರೆಡ್ಡಿ ಟಿಕೆಟ್ ಗಾಗಿ ದೆಹಲಿಮಟ್ಟದ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.

ಸದ್ಯಕ್ಕಂತೂ ಕೊಪ್ಪಳ ಲೋಕಸಭೆಯ ಕೈ ಟಿಕೆಟ್ ಗೆ ಜಿದ್ದಾಜಿದ್ದಿ ನಡೆದಿದ್ದು, ಅಂತಿಮ ಹುರಿಯಾಳು ಯಾರಾಗುತ್ತಾರೆ ಎಂಬುವುದರ ಮೇಲೆ ಹಾಲಿ ಸಂಸದ ಬಿಜೆಪಿಯ ಕರಡಿ ಸಂಗಣ್ಣವರ ಭವಿಷ್ಯ ನಿಂತಿದೆ.

ಈರಯ್ಯ ಕುರ್ತಕೋಟಿ ,  The news24 ಯಲಬುರ್ಗಾ

TRENDING