Sunday, November 29, 2020
Home ದೇಶ ಅಮ್ಮನ ಪ್ರೀತಿಗೆ ಕಾನೂನಿನ ಹಂಗಿಲ್ಲ ! - ಅಲ್ಲಿ ನಿಜಕ್ಕೂ ನಡೆದಿದ್ದೇನು ಗೊತ್ತಾ ?

ಇದೀಗ ಬಂದ ಸುದ್ದಿ

ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ...

ಬೆಂಗಳೂರು: ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ ಜೋಕೆ! ಮದುವೆ ಹೆಸರಲ್ಲಿ ವಂಚಿಸುವ ಗ್ಯಾಂಗ್​ ನಗರದಲ್ಲಿ ಅಡಗಿದೆ. ಶಾದಿ ಕಾಟ್ ಕಾಮ್, ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪ್ರೊಫೈಲ್​ ಅಪ್​ಲೋಡ್​ ಮಾಡಿ ಅಮಾಯಕರ...

ಎಂಟು ತಿಂಗಳ ಹಸುಗೂಸು ಸೇರಿ 4 ಮಕ್ಕಳ...

ಲಕ್ನೋ,ನ.28-ಹೆತ್ತ ತಾಯಿಯೇ ತಮ್ಮ ನಾಲ್ಕು ಹೆಣ್ಣು ಮಕ್ಕಳ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ. ಎಂಟು ತಿಂಗಳ ಹಸುಗೂಸು ಸೇರಿದಂತೆ 7 ವರ್ಷದೊಳಗಿನ ನಾಲ್ಕು...

ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ಪ್ರಕರಣ:...

ಹುಬ್ಬಳ್ಳಿ: ನವೆಂಬರ್ 21ರಂದು ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತ‌ ಉಂಟಾಗಿತ್ತು. ಈ ಅಪಘಾತದಲ್ಲಿ...

ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಕೋಲ್ಕತ್ತ: ಡಿಸೆಂಬರ್‌ 2ರಿಂದ 54 ರೈಲುಗಳೊಂದಿಗೆ ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಕೋವಿಡ್‌ನಿಂದಾಗಿ ಈ ವರ್ಷದ...

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

ಅಮ್ಮನ ಪ್ರೀತಿಗೆ ಕಾನೂನಿನ ಹಂಗಿಲ್ಲ ! – ಅಲ್ಲಿ ನಿಜಕ್ಕೂ ನಡೆದಿದ್ದೇನು ಗೊತ್ತಾ ?

ಅದು ಅಪ್ಪಟ ಅಮ್ಮನ ಪ್ರೀತಿ. ಎದುರಿಗಿದ್ದದ್ದು, ದೇಶದ ಪರಮೋಚ್ಚ ಮಹಾನುಭಾವ. ಆದರೆ, ಆ ಅಮ್ಮನಿಗಿದ್ದದ್ದು ಮಗನ ಕಂಡ ಭಾವ. ಎದುರಿಗಿದ್ದವರ ಕಣ್ಣಿನಲ್ಲಿದ್ದದ್ದು ಧನ್ಯತಾ ಭಾವ.

ಅದು ರಾಷ್ಟ್ರಪತಿ ಭವನ. ಹೇಳಿ ಕೇಳಿ ಅಲ್ಲಿ ಸಾವಿರಾರು ಶಿಷ್ಟಾಚಾರಗಳಿವೆ. ರಾಷ್ಟ್ರಪತಿಗಳನ್ನು ಯಾರೂ ಮುಟ್ಟುವ ಹಾಗೆಯೇ ಇಲ್ಲ. ಆಹ್ವಾನದ ಹೊರತಾಗಿ ಅವರ ಸನಿಹಕ್ಕೆ ಯಾರೂ  ಹೋಗೋ ಹಾಗಿಲ್ಲ. ಅದೆಷ್ಟೇ ಕ್ಲೋಸ್ ಇರಲಿ, ರಾಷ್ಟ್ರಪತಿಗಳಿಗೆ ಕೊಡುವ ಗೌರವ  ಕೊಡಲೇ  ಬೇಕು.

ರಾಷ್ಟ್ರಪತಿ ಭವನದಲ್ಲಿ ಪದ್ಮಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿತ್ತು.   ಸಮಾರಂಭಗಳಲ್ಲಂತೂ ವಿಪರೀತ ಶಿಷ್ಟಾಚಾರವಿರುತ್ತದೆ. ಖುದ್ದು ಪ್ರಧಾನಿಗಳೂ  ರಾಷ್ಟ್ರಪತಿಗಳ ಅಪ್ಪಣೆ ಇಲ್ಲದೆ ಅವರ ಬಳಿ ನಿಂತುಕೊಳ್ಳುವಂತಿಲ್ಲ. ರಾಷ್ಟ್ರಪತಿಗಳು  ಓ ಕೆ  ಎಂದರಷ್ಟೇ ಹಸ್ತಲಾಘವ ಕೂಡಾ. ಇಲ್ಲದಿದ್ದರೆ ಇಲ್ಲ.  ಇಂತಹ  ಕಾನೂನು ಕಟ್ಟಳೆಗಳ ಮಧ್ಯೆ ಅದೊಂದು ಘಟನೆ ನಡೆದು ಹೋಗಿದೆ. ರಾಷ್ಟ್ರಪತಿ ಭವನದ ಇತಿಹಾಸದಲ್ಲಿಯೇ ನಡೆಯದ ಘಟನೆಯೊಂದು ಸಂಭವಿಸಿ ಹೋಗಿದೆ. ಕರ್ನಾಟಕದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಸ್ವೀಕರಿಸಲೆಂದು ವೇದಿಕೆ ಹತ್ತಿ ಬಂದಿದ್ದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ, ಅದೇನೋ ಪ್ರೀತಿಯಿಂದ ರಾಷ್ಟ್ರಪತಿ ಕೋವಿಂದ್ ಅವರ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿಯೇ ಬಿಟ್ಟರು. ಬೇರೆ ಸಂದರ್ಭವಾಗಿದ್ದರೆ ಈ ಘಟನೆ ಇನ್ನೇನೋ ಆಗಿಬಿಡುತ್ತಿತ್ತು. ಆದರೆ, ಅಲ್ಲಿದ್ದದ್ದು ರಾಷ್ಟ್ರಪತಿ  ಕೋವಿಂದ್. ಇದು ಅಪ್ಪಟ  ಅಮ್ಮನೊಬ್ಬಳ ಆಶೀರ್ವಾದ  ಎಂದು ಅಷ್ಟೇ ಗೌರವದಿಂದ ಶಿರಬಾಗಿ  ಸ್ವೀಕರಿಸಿದರು.

ಭಾರತೀಯ ಸಂಸ್ಕೃತಿ ಕಲಿಸೋದೂ ಇದನ್ನೇ ತಾನೆ. ವ್ಯಕ್ತಿ ಯಾರೇ ಇರಲಿ, ಆತ ಎಷ್ಟೇ ಎತ್ತರಕ್ಕೆ ಏರಿರಲಿ, ಅಮ್ಮನಿಗೆ ಆತ ಮಗನೇ, ಆ ಒಂದು ನಿಮಿಷಗಳ ಕಾಲ, ಸಾಲುಮರದ ತಿಮ್ಮಕ್ಕ ಅಮ್ಮನಾಗಿದ್ದಳು, ರಾಷ್ಟ್ರಪತಿಗಳು ಹೆಮ್ಮೆಯ ಸುಪುತ್ರನಂತೆ ಮಾತೃಹೃದಯಕ್ಕೆ ತಲೆ ಬಾಗಿದರು.

ಅಮ್ಮನೆಂದರೆ ಹಾಗೆಯೇ.  ಚಿಕ್ಕವರಿದ್ದಾಗ ಮಕ್ಕಳು ಎಡವಿದರೆ ಆತಂಕದಿಂದಲೇ ಸಂಭ್ರಮಿಸೋ ಅಮ್ಮ ದೊಡ್ಡವಾರದ ಮೇಲೆ ಎಡವಿದರೆ ಕಿವಿಹಿಂಡೋ ಮಾಹಾತಾಯಿ  ಆಕೆ. ಹಾಗೆ, ಆಸರೆ ಬಯಸಿ ಬಂದವರಿಗೆ ನೆರಳು, ಏಳ್ಗೆ ಬಯಸಿ ಬಂದವರಿಗೆ ಹಾರೈಕೆ ನೀಡೋ ಮಹಾಮಾಯಿ ಕೂಡಾ ಆಕೆಯೇ. ತಿಮ್ಮಕ್ಕನಲ್ಲಿ ರಾಷ್ಟ್ರಪತಿ ಭವನ, ಪ್ರಶಸ್ತಿ ರಾಷ್ಟ್ರಪತಿಗಳು, ಮುಂಭಾಗದಲ್ಲಿ ಪ್ರಧಾನಿ ಸಹಿತ ಗಣ್ಯರು..ಯಾವುದರ ಪರಿವೆಯೂ  ಇರಲಿಲ್ಲ.  ತನ್ನನ್ನು ಗೌರವಿಸಿದ ವ್ಯಕ್ತಿಗೆ ಮನದುಂಬಿ ಹರಸಬೇಕು ಎಂಬ ಉತ್ಕಟ  ಆಕಾಂಕ್ಷೆ ಮಾತ್ರ ಇತ್ತು.

ತಾಯಿ ಹೃದಯಕ್ಕೆ ಯಾರಾದರೇನು ? ಹರಸುವುದೊಂದಷ್ಟೇ ಗೊತ್ತು. ಅಲ್ವೇ ?

  • ಪ್ರೀತಮ್ ಕೆಮ್ಮಾಯಿ

TRENDING