Thursday, September 23, 2021
Homeಜಿಲ್ಲೆವಿಜಯಪುರಅಪರಿಚಿತ 4 ಮುಸುಕು ಧಾರಿಗಳಿಂದ ಮಕ್ಕಳ ಮೇಲೆ ಹಲ್ಲೆ

ಇದೀಗ ಬಂದ ಸುದ್ದಿ

ಅಪರಿಚಿತ 4 ಮುಸುಕು ಧಾರಿಗಳಿಂದ ಮಕ್ಕಳ ಮೇಲೆ ಹಲ್ಲೆ

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹಳೆಯ ಜ್ಞಾನಭಾರತಿ ಶಾಲಾ ಅವರಣದಲ್ಲಿ ಕಾಣಿಸಿಕೊಂಡ ನಾಲ್ವರು ಮುಸುಕುಧಾರಿಗಳು, ಶಿವು ಶಿವಶಂಕರ ಕುಂಬಾರ (13) ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಮುತ್ತು ಕುಂಬಾರ್(9) ಕೈಯಲ್ಲಿ ಚಾಕು ಹಿಡಿದ ಮುಸುಕು ದಾರಿಗಳನ್ನು ಕಂಡು ಪರಾರಿಯಾಗಿ ಬಂದೆ ಎನ್ನುತ್ತಾನೆ. ಇಬ್ಬರು ಮಕ್ಕಳು ಕೂಡಿಕೊಂಡು ಕೆಲಸದ ನಿಮಿತ್ತ ಬೀದಿ ದೀಪಗಳು ಇಲ್ಲದ ಕತ್ತಲಿನ ರಸ್ತೆಯಲ್ಲಿ ನಡೆದು ಹೋಗುವಾಗ ನಾಲ್ವರು ಮುಸುಕುಧಾರಿಗಳು ವಾಹನದಲ್ಲಿ ಬಂದು ಶಿವು ಕುಂಬಾರ ನನ್ನು ಪಕ್ಕಕ್ಕೆ ಎಳೆದು ಏಕಾಏಕಿ ಹಲ್ಲೆ ಮಾಡಿ ಚಾಕುವಿನಿಂದ ಮೈ ಮೇಲೆ ಗಾಯ ಮಾಡಿ ಥಳಿಸಿದ್ದಾರೆ.  ಅಷ್ಟರಲ್ಲಿ ಮುತ್ತು ಹಿಡಿಯಲು ಹೋದಾಗ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಮನೆಯವರು ಹೇಳುತ್ತಾರೆ.

ಪಟ್ಟಣದ ಅತ್ಯಂತ ಜನ ಬಿಡಿ ಪ್ರದೇಶದಲ್ಲಿಯೇ ನಡೆದಿದ್ದು ಪಟ್ಟಣದಲ್ಲಿ ಆತಂಕ ಸೃಷ್ಟಿಸಿದೆ. ಬಂದವರು ಮಕ್ಕಳ ಕಳ್ಳರು ಇರಬಹುದು ಎಂಬ ಶಂಕೆ ಕುಟುಂಬದವರಿಂದ ಕೇಳಿ ಬರುತ್ತದೆ. ಶಿವ ಕುಂಬಾರ್ ಸರ್ಕಾರಿ ಆಸ್ಪತ್ರೆ ಸಿಂದಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img