Thursday, September 23, 2021
Homeಜಿಲ್ಲೆSBI ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡಬಹುದು – ಏನಿದು "Yono cash''

ಇದೀಗ ಬಂದ ಸುದ್ದಿ

SBI ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ ಮಾಡಬಹುದು – ಏನಿದು “Yono cash”

ಭಾರತೀಯ ಸ್ಟೇಟ್‌ ಬ್ಯಾಂಕ್‌  ಗ್ರಾಹಕರಿಗೆ, ಕಾರ್ಡ್‌ ಬಳಸದೆಯೇ ಎಟಿಎಂ ನಿಂದ ಹಣ ಡ್ರಾ ಮಾಡುವ “Yono cash”  ಎಂಬ ಹೊಸ ಅವಕಾಶವನ್ನು ತನ್ನ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಆರಂಭಿಸಿದೆ. ಈ ವಿನೂತನ ಸೇವೆ ನೀಡುತ್ತಿರುವ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಎಸ್ ಬಿ ಐ ಪಾತ್ರವಾಗಿದೆ.  ಬ್ಯಾಂಕ್ ನ 16,500 ಎಟಿಎಂಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಗ್ರಾಹಕರು ಯೋನೋ APP ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. 

ಎಟಿಎಂ ಕಾರ್ಡ್‌ ಬಳಕೆದಾರರಿಗೆ ಸ್ಕಿಮ್ಮಿಂಗ್‌ ಮತ್ತು ಕ್ಲೋನಿಂಗ್‌ ನಿಂದಾಗಿ ತಮ್ಮ ಹಣ ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ಕಾರ್ಡ್‌ ಬಳಸದೆಯೇ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಎಟಿಎಂ ನಿಂದ ಹಣ ಡ್ರಾ ಮಾಡುವ “Yono cash” ಸೌಕರ್ಯವನ್ನು ಎಸ್‌ಬಿಐ ಜಾರಿಗೆ ತಂದಿದೆ. 

ಎಟಿಎಂ ಕಾರ್ಡ್‌ ಬಳಸದೆಯೇ ಎಟಿಎಂ ಬೂತ್‌ ನಿಂದ ಹಣ ಡ್ರಾ ಮಾಡಲು ಗ್ರಾಹಕರು ತಮ್ಮ ಮೊಬೈಲ್‌ ಮೂಲಕ ಆರು ಅಂಕಿಗಳ ಪಿನ್‌ ಮತ್ತು ಟ್ರಾನ್‌ಸ್ಯಾಕ್ಷನ್‌ ಪಿನ್‌ ಅನ್ನು ಎಸ್‌ಎಂಎಸ್‌ ಮೂಲಕ ಪಡೆದುಕೊಳ್ಳಬೇಕು. 

ಕಾರ್ಡ್‌ ರಹಿತವಾಗಿ ಎಟಿಎಂ ನಿಂದ ಹಣ ಮಾಡುವ “Yono cash” ಸೌಕರ್ಯವನ್ನು ಎಸ್‌ಬಿಐ ನ್ಯಾಶನಲ್‌ ಪೇಮೆಂಟ್‌ ಕಾರ್ಪೊರೇಶನ್‌ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ ಗೂ ವಿಸ್ತರಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಮೊಬೈಲ್‌ ನಂಬರ್‌ ಮಾತ್ರವೇ ಬಳಸಿಕೊಂಡು ಹಣ ವರ್ಗಾವಣೆ ಮಾಡುವುದೂ ಸೇರಿದಂತೆ ಇನ್ನೂ ಹೆಚ್ಚಿನ ಬಗೆಯ ಸೌಕರ್ಯಗಳನ್ನು ಇದು ಒದಗಿಸಲಿದೆ.

ಮೊಬೈಲ್‌ ಅಪ್ಲಿಕೇಶನ್‌ ಸೌಕರ್ಯದ ಮೂಲಕ SBI ಗ್ರಾಹಕರು ಕಾರ್ಡ್‌ ಬಳಸದೆಯೇ ದಿನಕ್ಕೆ ಎರಡು ಬಾರಿ ತಲಾ 10,000 ರೂ. ಡ್ರಾ ಮಾಡಬಹುದಾಗಿದೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img