ಹುಬ್ಬಳ್ಳಿಯ CAR ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಕಮಿಷನರ್ ಹಾಗೂ ಅಪರಾಧ ವಿಭಾಗದ DCP ಶಿವಕುಮಾರ್ ರೌಡಿಗಳ ಪರೇಡ್ ನಡೆಸಿದ್ರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಮಾರು 400 ರಿಂದ 500 ರೌಡಿಗಳನ್ನು ಪರೇಡ್ ಗೆ ಕರೆಸಲಾಗಿತ್ತು. ಚುನಾವಣಾ ಸಮಯದಲ್ಲಿ ಜನರಿಗೆ ರಾಜಕೀಯ ಒತ್ತಡ ಹೇರಬಾರದು ಎಂದು ರೌಡಿಗಳಿಗೆ ಸೂಚಿಸಿದ್ರು. ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ವಾರ್ನಿಂಗ್ ನೀಡಿದರು.
