Thursday, September 23, 2021
Homeಜಿಲ್ಲೆಧಾರವಾಡವೃದ್ಧರಿಗೆ, ಅಂಗವಿಕಲರಿಗೆ, ಮಂಗಳಮುಖಿಯರಿಗೆ ಪೂರಕ ಮತದಾನ ವ್ಯವಸ್ಥೆ

ಇದೀಗ ಬಂದ ಸುದ್ದಿ

ವೃದ್ಧರಿಗೆ, ಅಂಗವಿಕಲರಿಗೆ, ಮಂಗಳಮುಖಿಯರಿಗೆ ಪೂರಕ ಮತದಾನ ವ್ಯವಸ್ಥೆ

 2019ರ ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲರಿಗೆ, ಮಂಗಳಮುಖಿಯರಿಗೆ ಹಾಗೂ ವೃದ್ಧರಿಗೆ ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ  ಸೂಕ್ತ ಮತದಾನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದರು.

ನಗರದಲ್ಲಿಂದು ಮಿನಿ ವಿಧಾನಸೌಧದಲ್ಲಿರುವ ತಹಶಿಲ್ದಾರ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆ ಸಂಪೂರ್ಣ ಮತದಾನ ಜಿಲ್ಲೆಯಾಗಿ ಮಾಡುವ ಹಿನ್ನೆಲೆಯಲ್ಲಿ ಅಂಗವಿಕಲರಿಗೆ, ಮಂಗಳಮುಖಿಯರಿಗೆ ಹಾಗೂ ವೃದ್ಧರಿಗೆ ಪೂರಕವಾದ ಮತದಾನದ ಬೂತ್ ವ್ಯವಸ್ಥೆ ಜಾರಿ ಮಾಡಲಾಗುತ್ತದೆ ಎಂದರು.

ವೃದ್ಧರಿಗೆ ವಿಕಲಚೇತನರಿಗೆ ಪಿಕಪ್ ಡ್ರಾಪ್ ಮಾಡುವ ಮೂಲಕ ಪ್ರತಿಯೊಬ್ಬರು ಮತದಾನದ ಹಕ್ಕು ಚಲಾಯಿಸುವಂತೆ ಸೂಕ್ತ ಕ್ರಮ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.‌ ವೃದ್ಧರು, ಅಂಗವಿಕಲರಿಗೆ ಸಾಲಿನಲ್ಲಿ ನಿಂತು ಮತದಾನ ಮಾಡಲು ತೊಂದರೆ ಉಂಟಾಗುತ್ತದೆ ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಹಾಗೂ ವ್ಯವಸ್ಥಿತ ಮತದಾನದ ಬೂತ್ ಅನುಷ್ಠಾನ ಮಾಡಲಾಗುತ್ತದೇ ಎಂದು ಅವರು ಮಾಹಿತಿ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img