Saturday, January 23, 2021
Home ರಾಜಕೀಯ ಮಲ್ಲಿಕಾರ್ಜುನ್ ಖರ್ಗೆ ಕೋಲಾರದಿಂದ ಕಣಕ್ಕೆ...?

ಇದೀಗ ಬಂದ ಸುದ್ದಿ

ಮಲ್ಲಿಕಾರ್ಜುನ್ ಖರ್ಗೆ ಕೋಲಾರದಿಂದ ಕಣಕ್ಕೆ…?

ಕೋಲಾರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.  ಹಾಲಿ ಸಂಸದ ಮುನಿಯಪ್ಪಗೆ ಟಿಕೆಟ್ ತಪ್ಪಿಸಲು ಕೆ.ಎಚ್ ವಿರೋಧಿ ಬಣ ಹೊಸ ತಂತ್ರ ರೂಪಿಸಿದೆ. ಶಾಸಕ ರಮೇಶ್ ಕುಮಾರ್ ನೇತೃತ್ವದ ತಂಡ ಹೈಕಮಾಂಡ್ ಮುಂದೆ ಹೊಸ ಬೇಡಿಕೆ ಇಟ್ಟಿದ ಎನ್ನಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಡಲಾಗಿದೆ ಎಂದು ನ್ಯೂಸ್ 24ಗೆ ಮೂಲಗಳು ತಿಳಿಸಿವೆ. ಈ ಬಾರಿ ಕಲಬರಗಿಯಲ್ಲಿ ಖರ್ಗೆ ಸೋಲಿಸಲು ಬಿಜೆಪಿ ಬಾರಿ ರಣತಂತ್ರ ನಡೆಸಿದೆ. ಅವರು ಸೋಲದಂತೆ ನೋಡಿಕೊಳ್ಳಬೇಕು. ಜೊತೆಗೆ  ಪರಿಶಿಷ್ಟ ಜಾತಿ ಮತಗಳು ನಿರ್ಣಾಯಕವಾಗಿರುವ ಕೋಲಾರ ಕ್ಷೇತ್ರದಿಂದಲೂ ಖರ್ಗೆ ಸ್ಪರ್ಧಿಸಲು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಹಾಲಿ ಸಂಸದ ಕೆ.ಎಚ್ ಮುನಿಯಪ್ಪಗೆ ಈಗ ಹೊಸ ಸಂಕಟ ಶುರುವಾಗಿದೆ.

TRENDING