Sunday, June 13, 2021
Homeರಾಜಕೀಯಮತ್ತೊಬ್ಬಒಕ್ಕಲಿಗ ನಾಯಕನಿಗೆ ಅನ್ಯಾಯ - ಮುದ್ದಹನುಮೇಗೌಡರ ಪರ ಸುಧಾಕರ್ ಬ್ಯಾಟಿಂಗ್

ಇದೀಗ ಬಂದ ಸುದ್ದಿ

ಮತ್ತೊಬ್ಬಒಕ್ಕಲಿಗ ನಾಯಕನಿಗೆ ಅನ್ಯಾಯ – ಮುದ್ದಹನುಮೇಗೌಡರ ಪರ ಸುಧಾಕರ್ ಬ್ಯಾಟಿಂಗ್

ಲೋಕಸಭೆ ಸೀಟು ಹಂಚಿಕೆ ವಿಚಾರ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಯೋಗ್ಯ ಒಕ್ಕಲಿಗ ನಾಯಕನಿಗೆ ಅನ್ಯಾಯವಾಗಿದೆ , ನನ್ನ ನೈತಿಕ ಬೆಂಬಲ ಯಾವಾಗಲೂ ನಿಮಗೆ ಇರುತ್ತದೆ ಎಂದು ಮುದ್ದಹನುಮೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ.
ತುಮಕೂರು ಕ್ಷೇತ್ರಕ್ಕೆ ಮುದ್ದಹನುಮೇಗೌಡರು ಸಾಕಷ್ಟು ಅನುದಾನ ತಂದಿದ್ದಾರೆ. ಹೆಚ್ ಎ ಎಲ್ ಘಟಕ, ಇಸ್ರೋ,ರೈಲ್ವೆ ಸೇರಿದಂತೆ ಹಲವು ಯೋಜನೆಗಳನ್ನ ಮುದ್ದಹನುಮೇಗೌಡರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಎಲ್ಲಾ ಕಡೆ ಹಾಲಿ ಸಂಸದರಿರುವ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಆದ್ರೆ ತುಮಕೂರಿನ ವಿಚಾರದಲ್ಲಿ ಮಾತ್ರ ಹಾಗೇ ಆಗಿಲ್ಲ. ಮುದ್ದಹನುಮೇಗೌಡ ರ ಕೊಡುಗೆ  ನೋಡಿ ಅವರಿಗೆ ಟಿಕೆಟ್ ನೀಡಬೇಕು ಎಂದು ತುಮಕೂರು ಕಾಂಗ್ರೆಸ್ ಘಟಕ  ಹೈಕಮಾಂಡ್ ಗೆ ಮನವಿ ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img