Thursday, September 23, 2021
Homeದೇಶನಾನೂ ಚೌಕಿದಾರ್ ! - ಕಾರ್ಯಕರ್ತರಿಗೆ ಮೋದಿ ಬೋಧಿಸಿದ ಪ್ರತಿಜ್ಞೆ ಏನು ಗೊತ್ತಾ ?

ಇದೀಗ ಬಂದ ಸುದ್ದಿ

ನಾನೂ ಚೌಕಿದಾರ್ ! – ಕಾರ್ಯಕರ್ತರಿಗೆ ಮೋದಿ ಬೋಧಿಸಿದ ಪ್ರತಿಜ್ಞೆ ಏನು ಗೊತ್ತಾ ?

ಚೌಕಿದಾರ್ ಚೋರ್ ಹೈ ಎಂಬ ಕಾಂಗ್ರೆಸ್ ಕ್ಯಾಂಪೇನ್ ಗೆ ಪ್ರಧಾನಿ ನರೇಂದ್ರ ಮೋದಿ ಸರಿಯಾಗಿ ಟಾಂಗ್ ನೀಡಿದ್ದಾರೆ.  ಚುನಾವಣೆ ಹೊಸ್ತಿಲಲ್ಲೇ ಮೋದಿ ಹೊಸ ಘೋಷಾವಾಕ್ಯ ಹೊರಡಿಸಿದ್ದಾರೆ. ಕಳೆದ ಬಾರಿ  ಬಿಜೆಪಿ ಘರ್ ಘರ್ ಮೋದಿ ಎಂಬ ಕ್ಯಾಂಪೇನ್ ಹಮ್ಮಿಕೊಂಡಿತ್ತು. ಈ ಬಾರಿ  ಬಿಜೆಪಿ, ಮೈ ಭೀ ಚೌಕಿದಾರ್ ಎಂಬ ಘೋಷಾವಾಕ್ಯ ಹೊರಡಿಸಿದೆ.

ಬೆಳ್ಳಂಬೆಳಗ್ಗೆ ಟ್ವೀಟ್ ಮಾಡಿರೋ ಮೋದಿ ದೇಶಕ್ಕಾಗಿ ನಾನೊಬ್ಬನೇ ಅಲ್ಲ, ಲಕ್ಷಾಂತರ ಮಂದಿ ದುಡಿಯುತ್ತಿದ್ದಾರೆ. ಅವರೆಲ್ಲರೂ ಚೌಕಿದಾರರೇ ಆಗಿದ್ದಾರೆ. ಅಂದರೆ ಕಾವಲುಗಾರರೇ ಆಗಿದ್ದಾರೆ ಎಂದು ಮೋದಿ  ಪ್ರತಿಪಾದಿಸಿದ್ದಾರೆ.  ಭ್ರಷ್ಟಾಚಾರ, ಕೊಳಚೆ, ಸಾಮಾಜಿಕ ಪಿಡುಗಗಳ  ವಿರುದ್ಧ  ಹೋರಾಡುವ  ಪ್ರತಿಯೊಬ್ಬರು  ಕೂಡಾ ಈ ದೇಶದ ಕಾವಲುಗಾರರು ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ. 

ಮೋದಿ ಘೋಷಣೆ ಹೊರಡಿಸುತ್ತಿದ್ದಂತೆಯೇ,ಬಿಜೆಪಿ  ಕಾರ್ಯಕರ್ತರೆಲ್ಲರೂ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮೈ ಭೀ ಚೌಕಿದಾರ್ ಎಂಬ ಬರಹಗಳನ್ನು ಹಾಕಿಕೊಳ್ಳತೊಡಗಿದ್ದಾರೆ. ಇದೀಗ ವೈರಲ್ ಆಗತೊಡಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img