Wednesday, January 20, 2021
Home ದೇಶ ನಾನು ಜೀವಂತವಾಗಿದ್ದೇನೆ …ಮೋದಿಯೊಂದಿಗೂ ಸೆಣಸಬಲ್ಲೆ..ಉಗ್ರ ಮಸೂದ್ ಅಜರ್

ಇದೀಗ ಬಂದ ಸುದ್ದಿ

ನಾನು ಜೀವಂತವಾಗಿದ್ದೇನೆ …ಮೋದಿಯೊಂದಿಗೂ ಸೆಣಸಬಲ್ಲೆ..ಉಗ್ರ ಮಸೂದ್ ಅಜರ್

ನಾನು ಸತ್ತಿಲ್ಲ ಇನ್ನೂ ಬದುಕಿದ್ದೇನೆ. ನನಗೇನೂ ಆಗಿಲ್ಲ. ನನ್ನ ಮೂತ್ರಪಿಂಡಗಳು ಆರೋಗ್ಯವಾಗಿವೆ. ಬಿಲ್ಲುಬಾಣಗಳೊಂದಿಗೆ ಮೋದಿಯೊಂದಿಗೂ ಸ್ಪರ್ಧೆಗಿಳಿಯಬಲ್ಲೆ. ಬಾಲಕೋಟ್ ನಲ್ಲಿಯೂ ಏನೂ ಆಗಿಲ್ಲ. ಹೀಗಂತ ಹೇಳಿದ್ದು ಬೇರೆ ಯಾರು ಅಲ್ಲ. ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ .
ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖವಾಣಿ ಅಲ್ ಕಲಂನಲ್ಲಿ ಸಾದಿ ಹೆಸರಲ್ಲಿ ಅಂಕಣ ಬರೆದಿರುವ ಉಗ್ರ ಮಸೂದ್ ಅಜರ್, ‘ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನನ್ನ ಆರೋಗ್ಯ ಉತ್ತಮವಾಗಿದೆ. ನಾನೆಷ್ಟು ಸದೃಢನಾಗಿದ್ದೇನೆಂದು ತಿಳಿಯಲು ಮೋದಿ ನನ್ನೊಂದಿಗೆ ಬಿಲ್ಲು ಬಾಣ ಸ್ಪರ್ಧೆ ನಡೆಸಲಿ’ ಎಂದು ಸವಾಲು ಹಾಕಿದ್ದಾನೆ.  ನಮ್ಮ ಸಂಘಟನೆ ಸದಸ್ಯರೆಲ್ಲರೂ ಚೆನ್ನಾಗಿದ್ದಾರೆ. ಪುಲ್ವಾಮಾ ದಾಳಿ ನಡೆಸಿದ ಕಾಶ್ಮೀರದ ಆದಿಲ್‌ ಅಹಮದ್ ದರ್‌ ಇನ್ನೂ ಬದುಕಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಕಣಿವೆ ಹೊರಗೂ ಹಬ್ಬಬಹುದು  ಎಂದು ಅಂಕಣದಲ್ಲಿ ಹೇಳಿಕೊಂಡಿದ್ದಾನೆ. ಉಗ್ರ ಮಸೂದ್ ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ಪಾಕಿಸ್ತಾನ ಹಾಗೂ ಭಾರತ ಹೇಳಿತ್ತು.   ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿತ್ತು. ಹೀಗಾಗಿ  ಈ ಅಂಕಣ ಈತ ಬರೆದಿರೋದಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
 

TRENDING