Monday, January 25, 2021
Home ರಾಜಕೀಯ ‘ಕೋತಿ ತಾನು ಕೆಡೋದಲ್ದೆ..’ ಸಿದ್ದುಗೆ ಬಿಜೆಪಿ ಟಾಂಗ್

ಇದೀಗ ಬಂದ ಸುದ್ದಿ

‘ಕೋತಿ ತಾನು ಕೆಡೋದಲ್ದೆ..’ ಸಿದ್ದುಗೆ ಬಿಜೆಪಿ ಟಾಂಗ್

ಲೋಕಸಭಾ ಚುನಾವಣಾ ರಣಕಣ ರಂಗೇರಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ ಮೈಸೂರಿನಿಂದ ಕಣಕ್ಕಿಳಿಯಬೇಕು ಎಂದು ಸಿದ್ದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಬಿಜೆಪಿ ಲೇವಡಿ ಮಾಡಿದೆ. ತನ್ನ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದವರು ಮತ್ತೊಬ್ಬ ಗೆಲ್ಲಲಾಗದವರಿಗೆ ಮಣೆ ಹಾಕುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದರೊಂದಿಗೆ ‘ ಕೋತಿ ತಾನು ಕೆಡೋದಲ್ದೆ…’ ಎಂದು ಗಾದೆ ಮಾತನ್ನು ಕೂಡಾ ಸೇರಿಸಿದೆ.

ಕರ್ನಾಟಕ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಲೇ ಬಂದಿದೆ. ಈ ಹಿಂದೆ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿಷಯದಲ್ಲಿಯೂ ಇದು ಸಾಬೀತಾಗಿದೆ. ನಮ್ಮ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಕೂಡಾ ಕರ್ನಾಟಕದಿಂದ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

TRENDING