Thursday, September 23, 2021
Homeಜಿಲ್ಲೆಕಬ್ಬಿಣದ ಕಡಲೆಯಾದ ಪ್ರಶ್ನೆ ಪತ್ರಿಕೆ- ಪಿಯುಸಿ ಬಯಲಾಜಿಗೆ ಗ್ರೇಸ್ ಅಂಕ ನೀಡೋ ಸಾಧ್ಯತೆ

ಇದೀಗ ಬಂದ ಸುದ್ದಿ

ಕಬ್ಬಿಣದ ಕಡಲೆಯಾದ ಪ್ರಶ್ನೆ ಪತ್ರಿಕೆ- ಪಿಯುಸಿ ಬಯಲಾಜಿಗೆ ಗ್ರೇಸ್ ಅಂಕ ನೀಡೋ ಸಾಧ್ಯತೆ

ದ್ವಿತೀಯ ಪಿಯುಸಿ ಜೀವ ವಿಜ್ಞಾನ ಪೇಪರ್ ಗೆ ಗ್ರೇಸ್ ಅಂಕ ನೀಡೋ ಸಾಧ್ಯತೆ ಇದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ನೇಮಿಸಿದೆ. ಬಯಲಾಜಿ ಪರೀಕ್ಷೆ ಬರೆದ ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ಕಣ್ಣೀರುಹಾಕಿಕೊಂಡು ಹೊರ ನಡೆದಿದ್ದರು. ಶಿಕ್ಷಣ ಇಲಾಖೆಯ ಸಹಾಯವಾಣಿ ಮತ್ತು ಇಮೇಲ್ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಲವು ಜಿಲ್ಲೆಗಳಿಂದ ವಿದ್ಯಾರ್ಥಿಗಳು ದೂರು ನೀಡಿದ್ರು. ನೀಟ್ ಪರೀಕ್ಷೆಗಿಂತಲೂ ಬಯಾಲಜಿ ಪರೀಕ್ಷೆ ಕಷ್ಟವಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಸಮಿತಿ ಸದಸ್ಯರು ಪ್ರಶ್ನೆಪತ್ರಿಕೆ ಕಷ್ಟವಾಗಿತ್ತು ಎಂದು ಹೇಳಿದರೆ ಮಕ್ಕಳಿಗೆ ಗ್ರೇಸ್ ಅಂಕಗಳನ್ನು ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಬಿಎಸ್ಸಿ ಅಗ್ರಿಕಲ್ಚರ್ ಮತ್ತು ಬಿ ಟೆಕ್ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಿಯುಸಿ ಬಯಾಲಜಿ ಅಂಕಗಳನ್ನು ಪರಿಗಣಿಸಲಾಗುವುದು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img