Sunday, September 19, 2021
Homeದೇಶಉಗ್ರ ಮಸೂದ್‌ ಅಜರ್‌ ಕಪ್ಪು ಪಟ್ಟಿಗೆ : ಚರ್ಚೆಗೆ ಸಿದ್ಧ ಎಂದ ಚೀನಾ

ಇದೀಗ ಬಂದ ಸುದ್ದಿ

ಉಗ್ರ ಮಸೂದ್‌ ಅಜರ್‌ ಕಪ್ಪು ಪಟ್ಟಿಗೆ : ಚರ್ಚೆಗೆ ಸಿದ್ಧ ಎಂದ ಚೀನಾ

ಪಾಕಿಸ್ತಾನದ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ನಿಷೇಧಿತ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಕುರಿತಂತೆ ಚರ್ಚೆಗೆ ಸಿದ್ಧ ಎಂದು ಚೀನಾ ಹೇಳಿದೆ. ಭಾರತ ಸಹಿತ ಎಲ್ಲಾ ರಾಷ್ಟ್ರಗಳೊಂದಿಗೆ ಚರ್ಚಿಸಲು ಒಲವು ತೋರಿದೆ. ಮಸೂದ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವನ್ನು ನಿರಂತರ ನಾಲ್ಕನೇ ಬಾರಿಗೆ ಚೀನಾ ತಾಂತ್ರಿಕ ನೆಪದಲ್ಲಿ  ವಿಫ‌ಲಗೊಳಿಸಿತ್ತು. 40 ಭಾರತೀಯ ಯೋಧರನ್ನು ಬಲಿ ಪಡೆಯಲಾಗಿದ್ದ ಪುಲ್ವಾಮಾ ಉಗ್ರ ದಾಳಿ ತನ್ನದೇ ಕೃತ್ಯವೆಂದು ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಹೊಣೆ ಹೊತ್ತಿತ್ತು. ಈ ಹಿನ್ನೆಲೆಯಲ್ಲಿ ಉಗ್ರ ಮಸೂದ್‌ ನನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತಂತೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚಾಗಿತ್ತು. ಚೀನಾ ನಡೆಯನ್ನ ಭಾರತ ಮಾತ್ರವಲ್ಲದೆ ಅಮೆರಿಕ, ಫ್ರಾನ್ಸ್ , ಬ್ರಿಟನ್ ದೇಶಗಳು ವಿರೋಧಿಸಿದ್ದವು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img