ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕು ಮೋಳೆ ಗ್ರಾಮದಲ್ಲಿ ಕರ್ನಾಟಕ ಆಯಸ್ಕಾಂತ ಆರೋಗ್ಯ ಸಂಸ್ಥೆ ತುಮಕೂರು ಇವರ ಆಶ್ರಯದಲ್ಲಿ ಗ್ರಾಮದಲ್ಲಿ 20 ದಿನಗಳ ಉಚಿತ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡ ಸಂದೀಪ್ ನಲವಡೆ ಕಳೆದ 20 ದಿನಗಳಿಂದ ನಡೆದ ಉಚಿತ ಶಿಬಿರದಲ್ಲಿ ಗ್ರಾಮದ ಹಿರಿಯರು ಹೆಣ್ಣುಮಕ್ಕಳು ತಮಗೆ ಇರುವಂತ ಕಾಯಿಲೆ ಬಗ್ಗೆ ಚಿಕಿತ್ಸೆ ತೆಗೆದು ಕೊಂಡು ಸರಿ ಸುಮಾರು 60 ರಿಂದ 80 ಪ್ರತಿಶತ ಫಲಿತಾಂಶವನ್ನು ಕಂಡುಕೊಂಡಿದ್ದಾರೆ ಇಂತಹ ಆಯಸ್ಕಾಂತ ಶಿಬಿರಗಳಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ ನಮ್ಮ ಗ್ರಾಮದಲ್ಲಿ ಬಂದು ದೂರದ ತುಮಕೂರಿನ ಸಂಸ್ಥೆ ಉಚಿತವಾಗಿ ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೋರಕನಾಥ ಕೊಳೇಕರ್ ನಾನು ಕೂಡ ಸುಮಾರು ಹದಿನೈದು ದಿನಗಳಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸುಮಾರು 60 ಪರ್ಸೆಂಟ್ ಗಳಷ್ಟು ನನ್ನ ಕಾಯಿಲೆ ವಾಸಿಯಾಗಿದೆ ಎಂದರು.
ಇದೇ ರೀತಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳು ತಮಗೆ ಆದ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಸುಮಾರು ನಾಲ್ಕು ನೂರ ಮೂವತ್ತು ರೋಗಿಗಳು ತಮ್ಮ ರೋಗ ಗುಣವಾದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.