ಚಡಚಣ ತಾಲ್ಲೂಕಿನ ಬರಡೋಲ ಸಮೀಪದ ದುಮಕನಾಳ ಕ್ರಾಸ್ ಹತ್ತಿರ ಶಾಲಾ ವಾಹನ ಹಾಗೂ ಸ್ವಿಪ್ಟ್ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಬರಡೋಲ ಗ್ರಾಮದ ಚನ್ನಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಓಮ್ನಿ ಕಾರ್ ಅಪಘಾತಕ್ಕಿಡಾದ ವಾಹನ. ಶಾಲಾ ವಾಹನದಲ್ಲಿದ್ದ ಏಳು ಮಕ್ಕಳು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾವೀರ ಮಾಲೆಗಾಂವೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.