Sunday, June 13, 2021
Homeಜಿಲ್ಲೆಕಲಬುರ್ಗಿಚಿಂಚೋಳಿಯಲ್ಲಿ ಪ್ರಿಯಾಂಕ್ ಖರ್ಗೆ ಸ್ಪರ್ಧಿಸಲಿ – ಉಮೇಶ್ ಜಾಧವ್ ಸವಾಲು

ಇದೀಗ ಬಂದ ಸುದ್ದಿ

ಚಿಂಚೋಳಿಯಲ್ಲಿ ಪ್ರಿಯಾಂಕ್ ಖರ್ಗೆ ಸ್ಪರ್ಧಿಸಲಿ – ಉಮೇಶ್ ಜಾಧವ್ ಸವಾಲು

ಪ್ರಿಯಾಂಕ್ ಖರ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಂಚೋಳಿಯಿಂದ ಸ್ಪರ್ಧಿಸಲಿ. ಅಲ್ಲಿಂದ ಗೆದ್ದು ದತ್ತುಪುತ್ರನಾಗಲಿ ಅಂತ ಕಲಬುರ್ಗಿಯಲ್ಲಿ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ. ನಾನು ಬಿಜೆಪಿಯಿಂದ 50 ಕೋಟಿ ಹಣ ಪಡೆದಿಲ್ಲ. ಜಗತ್ತಿನ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲಿ ಅಂತ ಹೇಳಿದ್ದಾರೆ.   ಸ್ಪೀಕರ್ ರಮೇಶ್ ಕುಮಾರ್  ಯಾರ ಒತ್ತಡಕ್ಕೂ ಮಣಿಯಲ್ಲ. ನ್ಯಾಯಬದ್ಧವಾಗಿ ಕೆಲಸ ನಿರ್ವಹಿಸಲಿದ್ದಾರೆ. ಶೀಘ್ರವೇ ನನ್ನ ರಾಜೀನಾಮೆ ಅಂಗೀಕಾರವಾಗಲಿದೆ ಅನ್ನೋ ವಿಶ್ವಾಸವಿದೆ ಅಂತ ಹೇಳಿದ್ದಾರೆ. ರಾಜೀನಾಮೆ ಅಂಗೀಕಾರವಾಗದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ ಅಂತ ಸ್ಪಷ್ಟಪಡಿಸಿದ್ದಾರೆ.  ಇದು ಸಂವಿಧಾನ ನೀಡಿರೋ ಹಕ್ಕು, ಹೀಗಾಗಿ ನಾನು ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ ಅಂತ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img