Sunday, June 13, 2021
Homeಜಿಲ್ಲೆಮಂಡ್ಯನನಗೆ ‘ಗೋ ಬ್ಯಾಕ್‌’ ಅನ್ತೀರಾ..? ಮಂಡ್ಯ ಮತದಾರರಿಗೆ ಸಿಎಂ ಕ್ಲಾಸ್

ಇದೀಗ ಬಂದ ಸುದ್ದಿ

ನನಗೆ ‘ಗೋ ಬ್ಯಾಕ್‌’ ಅನ್ತೀರಾ..? ಮಂಡ್ಯ ಮತದಾರರಿಗೆ ಸಿಎಂ ಕ್ಲಾಸ್

ಪುತ್ರನನ್ನ ಸಕ್ಕರೆ ನಾಡಿನಿಂದ ಸಂಸತ್ತಿಗೆ ಕಳುಹಿಸಲು ಪಣ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಮಂಡ್ಯ ಜನತೆಯನ್ನ  ಇಂದು ಭಾವನಾತ್ಮಕವಾಗಿ ಕಟ್ಟಿ ಹಾಕಿದ್ದಾರೆ.  ತನ್ನ ಅಧಿಕಾರವಧಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೇನೆ ಎಂದು ಕುಮಾರಸ್ವಾಮಿಯವರು ದಾಖಲೆಗಳ ಸಹಿತ ವಿವರಿಸಿದ್ರು.  ಮಂಡ್ಯ ಜಿಲ್ಲೆಗೆ ಇಷ್ಟೆಲ್ಲಾ ಕೊಡುಗೆ ನೀಡಿರುವ ನನಗೆ ಯಾರೋ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್‌’  ಅನ್ತಾರೆ. ನಾನಾಗಲೀ ನನ್ನ ಕಾರ್ಯಕರ್ತರಾಗಲೀ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ಈ ಬಾರಿ ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ದಯವಿಟ್ಟು ಕೈ ಬಿಡಬೇಡಿ ಎಂದು ಮಂಡ್ಯದ ಜನತೆಯಲ್ಲಿ ಮನವಿ ಮಾಡಿಕೊಂಡರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img