Saturday, January 23, 2021
Home ರಾಜಕೀಯ ಕಾಶಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆಗೆ ಇಳಿಯೋದು ಯಾರು ಗೊತ್ತಾ?

ಇದೀಗ ಬಂದ ಸುದ್ದಿ

ಕಾಶಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆಗೆ ಇಳಿಯೋದು ಯಾರು ಗೊತ್ತಾ?

ಕಾಶಿಯಲ್ಲಿ ಕಳೆದ ಬಾರಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಚಾಲೆಂಜ್  ಹಾಕಿದ್ದು ಅರವಿಂದ್  ಕೇಜ್ರಿವಾಲ್.  ಆದರೂ ಮೋದಿ ದಾಖಲೆ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಪ್ರಧಾನಿಯಾಗಿ ಮತ್ತೆ ವಿಶ್ವನಾಥನ ಸನ್ನಿಧಿಯಲ್ಲೇ ಮೋದಿ ಸ್ಪರ್ಧಿಸ್ತಿದ್ದಾರೆ. ಹಾಗಾದರೆ, ಮೋದಿ ವಿರುದ್ಧ ನಿಲ್ಲದು ಯಾರು ?

ಈ ಪ್ರಶ್ನೆಗೆ ಈಗ ಬಹುತೇಕ ಉತ್ತರ ಸಿಗಲಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ಸದ್ದು ಮಾಡುತ್ತಿರೋ ಭೀಮ್ ಆರ್ಮಿ ಎಂಬ ದಲಿತ ಸಂಘಟನೆಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೋದಿಗೆ ಸವಾಲೆಸೆಯುವುದಾಗಿ ಘೋಷಿಸಿದ್ದಾರೆ. ಯಾರೋ ಒಬ್ಬರು ಸಿಕ್ಕಿಬಿಟ್ಟರು ಎಂಬಂತೆ ತಕ್ಷಣವೇ ಕಾಂಗ್ರೆಸ್ ಮುಖಂಡರು ಆಜಾದ್ ರನ್ನು ಭೇಟಿಮಾಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಆಸ್ಪತ್ರೆ ಸೇರಿರುವ ಆಜಾದ್ ರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತು ಸಚಿನ್ ಪೈಲಟ್  ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಕಳೆದ ಬಾರಿ ಕೇಜ್ರಿವಾಲ್ ಗೆ ಬೆಂಬಲಿಸಿದಂತೆ  ಈ ಬಾರಿ ಆಜಾದ್ ಗೆ ಬೆಂಬಲಿಸುವ ಸಾಧ್ಯತೆ ಇದೆ. ಅಂದರೆ, ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಯಾರೂ ಸ್ಪರ್ಧೆಗೆ ಇಳಿಯಲ್ಲ ಎನ್ನಲಾಗ್ತಿದೆ.  

TRENDING