Thursday, September 23, 2021
Homeಜಿಲ್ಲೆಧಾರವಾಡಹುಬ್ಬಳ್ಳಿಯಲ್ಲಿ ಆಟೋ ಚಾಲಕನ ಅಟ್ಟಹಾಸ– ಸೆಕ್ಯುರಿಟಿ ಗಾರ್ಡ್ ಕತೆ ಏನಾಯ್ತು ಗೊತ್ತಾ ?

ಇದೀಗ ಬಂದ ಸುದ್ದಿ

ಹುಬ್ಬಳ್ಳಿಯಲ್ಲಿ ಆಟೋ ಚಾಲಕನ ಅಟ್ಟಹಾಸ– ಸೆಕ್ಯುರಿಟಿ ಗಾರ್ಡ್ ಕತೆ ಏನಾಯ್ತು ಗೊತ್ತಾ ?

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಅಟ್ಟಹಾಸ ಎಲ್ಲೇ ಮೀರಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇವತ್ತು ನಗರದ ಸಂಜೀವಿನಿ ಪಾರ್ಕ್ ಬಳಿ  ಆಟೋ ಚಾಲಕನೊಬ್ಬ ಸೆಕ್ಯುರಿಟಿ ಗಾರ್ಡ್ ಮೇಲೆ ಆಟೋ ಹರಿಸಿದ್ದಾನೆ.  ಹುಬ್ಬಳ್ಳಿಯಲ್ಲಿ BRDS ಬಸ್ ಗಳು ಸಂಚರಿಸುವ ರಸ್ತೆಯಲ್ಲಿ ಅನಧಿಕೃತವಾಗಿ ಆಟೋಗಳು ಸಂಚರಿಸುತ್ತಿವೆ. ಇಂತಹ ಆಟೋಗಳನ್ನು ತಡೆಯಲು ಸೆಕ್ಯುರಿಟಿ ಗಾರ್ಡ್ ನೇಮಿಸಲಾಗಿದೆ.  ಎರಡು ಆಟೋಗಳು ಬರುತ್ತಿದ್ದನ್ನ ಕಂಡ ಸೆಕ್ಯುರಿಟಿ ಗಾರ್ಡ್ ಆಟೋಗಳನ್ನ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಮುಂದೆ ಬರುತ್ತಿದ್ದ ಆಟೋ ಚಾಲಕ ಸೆಕ್ಯುರಿಟಿ ಗಾರ್ಡ್ ಗೆ  ಆಟೋದಿಂದ ಗುದ್ದಿದ್ದಾನೆ. ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ರಸ್ತೆಯಲ್ಲಿ ಬಿದ್ದು ನರಳುತ್ತಿದ್ರೂ ಆಟೋ ಚಾಲಕರು ಮಾನವೀಯತೆ ತೋರದೆ ಪರಾರಿಯಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img