Thursday, September 23, 2021
Homeದೇಶಮಸೂದ್‌ ಅಜರ್ ಜಾಗತಿಕ ಉಗ್ರ: ವಿಶ್ವಸಂಸ್ಥೆ ಠರಾವಿಗೆ ಚೀನಾ ಅಡ್ಡಿ ?

ಇದೀಗ ಬಂದ ಸುದ್ದಿ

ಮಸೂದ್‌ ಅಜರ್ ಜಾಗತಿಕ ಉಗ್ರ: ವಿಶ್ವಸಂಸ್ಥೆ ಠರಾವಿಗೆ ಚೀನಾ ಅಡ್ಡಿ ?

ಪಾಕಿಸ್ಥಾನದ ಜೈಷ್ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಚೀನಾ ಅಡ್ಡಗಾಲು ಹಾಕುವ ಸುಳಿವು ನೀಡಿದೆ. ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೆತ್ತಿಕೊಳ್ಳುವ ಮುನ್ನ ಬೀಜಿಂಗ್‌ ಇಂತಹ ಒಂದು ನಡೆಯನ್ನು ತಾನು ಬೆಂಬಲಿಸುವ ಸಾಧ್ಯತೆಗಳು ತೀರ ಕಡಿಮೆ ಎಂದು ಹೇಳಿದೆ.  ಎಲ್ಲರೂ ಒಪ್ಪಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳಬೇಕು. ಅದರಿಂದ ಸಮಸ್ಯೆ ಪರಿಹಾರವಾಗಬೇಕು ಎಂದು ಹೇಳುವ ಮೂಲಕ ಮತ್ತೆ ಕ್ಯಾತೆ ತೆಗೆದಿದೆ. ಪುಲ್ವಾಮಾ ದಾಳಿಯ ನಂತರ, ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ವಿಶ್ವಸಂಸ್ಥೆಯ ಭದ್ರತಾ,ಮಂಡಳಿಗೆ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಹೊಸ ಪ್ರಸ್ತಾವನೆ ಸಲ್ಲಿಸಿವೆ.  ಆದರೆ ಚೀನಾ ಈ ಕುರಿತು ಇನ್ನೂ ತನ್ನ ನಿರ್ಧಾರ ಬಹಿರಂಗಪಡಿಸಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img