Thursday, September 23, 2021
Homeದೇಶಉತ್ತಮ ಮತದಾನಕ್ಕಾಗಿ ಮೋದಿ ಟ್ವೀಟ್ ಅಭಿಯಾನ

ಇದೀಗ ಬಂದ ಸುದ್ದಿ

ಉತ್ತಮ ಮತದಾನಕ್ಕಾಗಿ ಮೋದಿ ಟ್ವೀಟ್ ಅಭಿಯಾನ

ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಮತದಾನ ಮಾಡಿ ಎಂದು ಟ್ವಿಟರ್​ ಅಭಿಯಾನ ಆರಂಭಿಸಿದ್ದಾರೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರೋ ಗಣ್ಯಾತೀಗಣ್ಯರಿಗೆ ಟ್ವೀಟ್​ಗಳನ್ನು ಟ್ಯಾಗ್​ ಮಾಡೋ ಮೂಲಕ ಹೆಚ್ಚು ಮತದಾನವಾಗುವಂತೆ ಪ್ರೇರಣೆ ನೀಡಿ ಎಂದು ಮನವಿ  ಮಾಡಿದ್ದಾರೆ. ಜನರಿಗೆ ಶೇ 100ರಷ್ಟು ಮತದಾನವಾಗುವಂತೆ ಪ್ರೋತ್ಸಾಹಿಸಿ ಎಂದು ಕರೆ ನೀಡಿದ್ದಾರೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ರಾಜಕೀಯ ಗಣ್ಯರಿಗೂ ಟ್ಯಾಗ್ ಮಾಡಿದ್ದಾರೆ. ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಕ್ ಖಾನ್, ಅಮಿತಾಬ್ ಬಚ್ಚನ್ ಕ್ರಿಕೆಟ್ ತಾರೆಗಳು ಸೇರಿದಂತೆ ವಿವಿಧ ಗಣ್ಯರಿಗೆ ಟ್ಯಾಗ್ ಮಾಡಿದ್ದಾರೆ. ಮಾಧ್ಯಮ ಕ್ಷೇತ್ರಗಳ ಗಣ್ಯರಿಗೂ ಹೆಚ್ಚು ಮತದಾನ ಮಾಡಲು ಪ್ರೇರೆಪಿಸುವಂತೆ ಮನವಿ ಮಾಡಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img