Thursday, September 23, 2021
Homeಜಿಲ್ಲೆಗದಗಆಧಾರ್ ಬೇಕಾ ? ತಲೆದಿಂಬು ಹಾಸಿಗೆ ಸಮೇತ ಬನ್ನಿ – ನ್ಯೂಸ್ 24 ಎಕ್ಸ್ ಕ್ಲೂಸಿವ್

ಇದೀಗ ಬಂದ ಸುದ್ದಿ

ಆಧಾರ್ ಬೇಕಾ ? ತಲೆದಿಂಬು ಹಾಸಿಗೆ ಸಮೇತ ಬನ್ನಿ – ನ್ಯೂಸ್ 24 ಎಕ್ಸ್ ಕ್ಲೂಸಿವ್

ಆಧಾರ್  ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರು ಏನು ಮಾಡಬೇಕು ? ತಲೆದಿಂಬು ಹಾಸಿಗೆ ಸಮೇತ ಹೋಗಬೇಕು ? ಆಚ್ಚರಿಯಾಯಿತೇ ?  ಗದಗ ಜಿಲ್ಲೆ ರೋಣ  ಪಟ್ಟಣದಲ್ಲಿ ಅಕ್ಷರಶ: ಇದೇ ಪರಿಸ್ಥಿತಿ ಇದೆ.

 ಸಾರ್ವಜನಿಕರು ಕಳೆದ ಹದಿನೈದು ದಿನಗಳಿಂದ ಹಾಸಿಗೆ ಸಮೇತ ಕಛೇರಿ ಎದುರು ಕಾಯಬೇಕಾದಂತ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಸೂಡಿ ಕ್ರಾಸ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆವರಣದಲ್ಲಿರುವ ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಪ್ರತಿದಿನ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇಲ್ಲಿ ಹಣ ಕೊಟ್ಟವರಿಗೆ ಸರದಿ ನಿಲ್ಲಿಸದೆ ಹಾಗೇ ಬಿಡಲಾಗ್ತಿದೆ. ರಾತ್ರಿಯಿಡಿ ನಿದ್ದೆಗೆಟ್ಟು ಸೊಳ್ಳೆ ಕಚ್ಚಿಸಿಕೊಂಡು ಸಾಲಿನಲ್ಲಿ ನಿಲ್ಲಬೇಕಾಗಿದೆ. ಮನೆ ಮಕ್ಕಳನ್ನು ಬಿಟ್ಟು ಪಾಳೆ ಹಚ್ಚಿದರೂ ಗುತ್ತಿಗೆದಾರರು ಸರಿಯಾಗಿ ಸ್ಪಂದಿಸುತ್ತಿಲ್ಲ. ಜೊತೆಗೆ ಈ ಆವರಣದಲ್ಲಿ ಏಜೆಂಟರುಗಳ ಹಾವಳಿಯೇ ಹೆಚ್ಚಾಗಿದೆ ಅಂತ  ನೊಂದವರು ಆರೋಪಿಸ್ತಿದ್ದಾರೆ.  ಸಂಬಂದಪಟ್ಟವರು ತಕ್ಷಣವೇ ಸ್ಪಂದಿಸಬೇಕಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img