Thursday, September 23, 2021
Homeಜಿಲ್ಲೆಬೆಂಗಳೂರು ಗ್ರಾಮಾಂತರನಿವೃತ್ತ ಯೋಧರಿಗೆ ಭವ್ಯ ಸ್ವಾಗತ.

ಇದೀಗ ಬಂದ ಸುದ್ದಿ

ನಿವೃತ್ತ ಯೋಧರಿಗೆ ಭವ್ಯ ಸ್ವಾಗತ.

17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ನಿವೃತ್ತಿಯಾಗಿ ತವರಿಗೆ ಮರಳಿದ ಯೋಧರಿಗೆ ಭವ್ಯ ಸ್ವಾಗತ ಸಿಕ್ತು. ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಬ್ಬರು ಯೋಧರು ರಾಜ್ಯಕ್ಕೆ ವಾಪಸ್ ಆದರು.. ತಾಯ್ನಾಡಿಗೆ ಮರಳಿದ ಯೋಧರಿಗೆ ದೇವನಹಳ್ಳಿ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ಸಿಕ್ತು.. ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಯೋಧ ಚನ್ನಕೇಶವ ಹಾಗೂ ಕೋಲಾರ ಶ್ರೀನಿವಾಸಪುರ ಶೆಟ್ಟಿಹಳ್ಳಿ ಗ್ರಾಮದ ಯೋಧ ಸುರೇಶ್ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯ್ತು. ಪಟ್ಟಣದ ಆಂಜನೇಯ ದೇವಾಲಯದಲ್ಲಿ ಪೂಜೆಯನ್ನ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ನಿವೃತ್ತ ಯೋಧರನ್ನು ಮೆರವಣಿಗೆ ಮಾಡಲಾಯ್ತು.. ಟಿಮ್ ಯೋಧ ನಮನ ತಂಡ ಹಾಗೂ ಪಟ್ಟಣದ ನೂರಾರು ದೇಶಭಿಮಾನಿಗಳಿಂದ ಯೋಧರನ್ನು ಮೆರವಣಿಗೆ ನಡೆಸಿ ಜಯ ಭಾರತ, ಭಾರತಕ್ಕೆ ಜಯ್ ಎಂದು ಜಯ ಘೋಷ ಕೂಗಿದರು. ನಾಸಿಕ್, ಜಮ್ಮು ಕಾಶ್ಮೀರ , ಪಂಜಾಬ್ ಸೇರಿದಂತೆ ಹಲವೆಡೆ 17 ವರ್ಷಗಳ ಸುಧೀರ್ಘ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧರಿಗೆ ಭಕ್ತಿ ಪೂರ್ವ ಸ್ವಾಗತ ನಡೆದ ಬಳಿಕ ಚನ್ನಕೇಶವ ಅವರ ತವರು ಊರಾದ ರೆಡ್ಡಿಹಳ್ಳಿಯಲ್ಲಿ ಚನ್ನಕೇಶವ ಮತ್ತು ಸುರೇಶ್ ಇಬ್ಬರಿಗೂ ಸನ್ಮಾನ ಮಾಡಲಾಯ್ತು.. ಇದೇ ವೇಳೆ ದೇಶಕ್ಕೆ‌ಹೆಮ್ಮೆ ತಂದ‌ ಯೋಧ ಚನ್ನಕೇಶವ ತಂದೆ ತಾಯಿ ಮತ್ತು ಯೋಧನ ಪತ್ನಿ ಗೂ ಸನ್ಮಾನ ಮಾಡಿ‌ ಗೌರವ ನೀಡಿದರು..

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img