Thursday, September 23, 2021
Homeಜಿಲ್ಲೆಬೆಂಗಳೂರು ಗ್ರಾಮಾಂತರಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಗೆ ಪದಾಧಿಕಾರಿಗಳ ಆಯ್ಕೆ.

ಇದೀಗ ಬಂದ ಸುದ್ದಿ

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಗೆ ಪದಾಧಿಕಾರಿಗಳ ಆಯ್ಕೆ.

ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಗೆ ಬೆಂಗಳೂರು ನಗರ ಜಿಲ್ಲಾ ಪಾದಾಧಿಕಾರಿಗಳ ಆಯ್ಕೆ ಹಾಗೂ ಸದಸ್ಯತ್ವ ಹೊಂದಾಣಿಕೆ ಕಾರ್ಯಕ್ರಮವನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಮೈಲನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಯಿತು. ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಜಿ.ಜಿ ಹಳ್ಳಿ ನಾರಾಯಣಸ್ವಾಮಿ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಡಾ|| ನರೇಂದ್ರ ಕುಮಾರ್ ನೇತೃತ್ವದಲ್ಲಿ ಹಲವಾರು ರೈತರನ್ನು ಹಸಿರು ಶಾಲು ಹಾಕುವ ಮೂಲಕ ಸದಸ್ಯತ್ವ ಪಡೆದರು. ನಮ್ಮ ಸಮಾಜದಲ್ಲಿ ಅನೇಕ ರೈತ ಮುಖಂಡರುಗಳು ಯಾವುದೇ ರಾಜಕೀಯ ವ್ಯಕ್ತಿಗಳ ಸಹಾಯ ಪಡೆಯದೆ ಅವರುಗಳು ಜೀವನ ಸಾಗಿಸುತ್ತಿದ್ದಾರೆ.ಸಮಾಜದ ಎಲ್ಲಾ ಭಾಗಗಳಲ್ಲಿ ರೈತರಿಗೆ ಸಾಕಷ್ಟು ಸಮಸ್ಯಗಳಿದ್ದು ಅವುಗಳೆಲ್ಲವನ್ನು ಸರಕಾರದ ಗಮನಕ್ಕೆ ತಂದು ತದನಂತರ ಆ ಸಮಸ್ಯೆಗಳನ್ನು ನಮ್ಮ ಸಂಘ ಹೊರಾಟ ಮಾಡಿ ರೈತರ ಸಹಾಯವಾಗುವಂತೆ ಮಾಡುತ್ತೇವೆ, ಅಲ್ಲದೆ ಇವತ್ತಿನ ದಿವಸಗಳಲ್ಲಿ ಸಂಘಟನೆಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಆದರೆ ಪ್ರೊಫೆಸರ್ ನಂಜುಂಡಸ್ವಾಮಿ ರವರ ಹಾದಿಯನ್ನು ನಡೆಯುವ ನಾವು ಯಾವುದೇ ಕಾರಣಕ್ಕೂ ಸಂಘಟನೆಯನ್ನು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಸದಾ ರೈತರ ನೋವು ನಲಿವಿಗೆ ಮುಡಿಪಾಗಿಟ್ಟ ಹೋರಾಟಗಳನ್ನು ಮಾಡುವೆವು ಎಂದರು. ಬೆಂಗಳೂರು ನಗರ ಜಿಲ್ಲೆಯ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮಣ್ಣ ಮಾತನಾಡಿ ನಾನು ಒಬ್ಬ ರೈತ ಕುಟುಂಬಕ್ಕೆ ಸೇರಿದವನಾಗಿದ್ದು ನಾನು ಶಿಕ್ಷಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದು ಈಗ ಮತ್ತೆ ರೈತ ಮಗನಾಗಿ ವ್ಯವಸಾಯ ಮಾಡುತ್ತಿದ್ದೇನೆ. ರೈತರು ಸಾಕಷ್ಟು ಸಮಸ್ಯೆಗಳನ್ನು ಹೆದುರಿಸುತ್ತಿದ್ದು ಅದನ್ನು ನಾನು ಸಹ ಅನುಭವಿಸುತ್ತಿದ್ದೇನೆ ಆದ್ದರಿಂದಲೇ ನಾನು ಈ ರೈತ ಸಂಘಟನೆಗೆ ಸೇರಿ ಸದಾ ರೈತರಿಗಾಗಿ ಶ್ರಮ ಪಟ್ಟು ಅವರಿಗೆ ನ್ಯಾಯ ದೊರಕಿಸುವೆ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img