Saturday, January 23, 2021
Home ಜಿಲ್ಲೆ ಮಂಡ್ಯ ರಾಜ್ಯದಲ್ಲಿ ಮೈತ್ರಿ ಇದ್ರು ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಶತ್ರುಗಳು..?

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಮೈತ್ರಿ ಇದ್ರು ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಶತ್ರುಗಳು..?

ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಕಷ್ಟ ಎಂದು ತಿಳಿಸಿದ ಶಾಸಕ ಸುರೇಶ್‌ಗೌಡ. ಸೈದ್ಧಾಂತಿಕವಾಗಿ ಮಂಡ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ರಾಜಕಾರಣ ಮಾಡಿದ್ದೇವೆ. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ಹೊದಿಕೊಳ್ಳುವುದು ಕಷ್ಟವಾಗುತ್ತದೆ. ನಿಜವಾದ ಕಾಂಗ್ರೆಸ್ಸಿಗರು ಪಕ್ಷದ ಮಾತು ಕೇಳಿ ಮೈತ್ರಿ ಅಭ್ಯರ್ಥಿ ಪರ ನಿಲ್ಲುತ್ತಾರೆ. ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸುತ್ತಾರೆ. ಶತ್ರುಗಳ ಶತ್ರು ಮಿತ್ರ ಎಂಬಂತೆ ಸೋತು ಕೆಲಸ ಇಲ್ಲದವರು ಸುಮಲತ ಸ್ಪರ್ಧೆ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ. ಮುಂಬರುವ ಲೋಕಸಭೆಗೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಒತ್ತಾಯ ವಿಚಾರ. ನಾವೇನು ಬೇಡ ಅಂದಿದ್ದೇವ. ಮೈತ್ರಿ ಧರ್ಮ ಪಾಲಿಸುವುದು ಧರ್ಮ ಇಲ್ಲಿ ಯಾರೋ ಮಾತನಾಡಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು. ನಮ್ಮ ಹೈಹಮಾಂಡ್ ಅವರ ಹೈ ಕಮಾಂಡ್ ಮಾತನಾಡುತ್ತೆ. ಕಳೆದ ಬಾರಿ ಮೈತ್ರಿ ಅಭ್ಯರ್ಥಿಗೆ ಕಾಂಗ್ರೆಸ್‌ನವರೆಲ್ಲ ಮತ ಹಾಕಿದ್ರಾ..? ಚುನಾವಣೆ ಮಾಡಿದ್ರ…? ಅಲ್ಲೂ ಮೋಸಗಾರರು ಇರುತ್ತಾರೆ. ಈ ಸಲವೂ ಅದೇ ರೀತಿ ಇರುತ್ತಾರೆ. ನಮ್ಮ ಅಭ್ಯರ್ಥಿ ಗೆಲ್ಲಿಸಲು ನಾವು ಹುಷಾರಾಗಿರುತ್ತೇವೆ. ಮೈತ್ರಿ ಅಭ್ಯರ್ಥಿ ಹಾಕಿದ್ರು ಕಾಂಗ್ರೆಸ್‌ನವರೆಲ್ಲ ನಮ್ಮ ಪರ ಕೆಲಸ ಮಾಡಲ್ಲ ಎಂದು ಹೇಳಿದ ಶಾಸಕ ಸುರೇಶ್‌‌ಗೌಡ. ಮಂಡ್ಯ ಜಿಲ್ಲೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲ್ಲ. ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಬಿಟ್ಟು ಕೊಡಲ್ಲ. ಎರಡು ಪಕ್ಷಗಳು ಲೋಕಸಭೆಗೆ ಹೆಚ್ಚು ಪಕ್ಷ ಗೆಲ್ಲಬೇಕು. ಆ ನಿಟ್ಟಿನಲ್ಲಿ ಟಿಕೆಟ್ ಹಂಚಿಕೆ ಆಗುತ್ತೆ. ಮಂಡ್ಯದಲ್ಲಿ ಸುಮಲತ ಪಕ್ಷೇತರರಾಗಿ ನಿಂತರೂ ನಮ್ಮ ಪಕ್ಷಕ್ಕೆ ನಷ್ಟವಿಲ್ಲ‌. ಮೈತ್ರಿ ಧರ್ಮ ಪಾಲನೆ ಆಯಾ ಪಕ್ಷಕ್ಕೆ ಬಿಟ್ಟದ್ದು. ಅಂಬರೀಷ್ ಕೆಲಸ ಮಾಡಿಲ್ಲ ಎಂಬ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರ. ಸತ್ಯ ಯಾವಾಗಲೂ ಕಹಿಯಾಗಿರುತ್ತೆ ಎಂದು ಸಿಎಂ ಮಾತನ್ನು ಸಮರ್ಥಿಸಿಕೊಂಡ ಶಾಸಕ ಸುರೇಶ್‌ಗೌಡ.

TRENDING