Thursday, September 23, 2021
Homeಜಿಲ್ಲೆಬೆಂಗಳೂರುಬಡ್ಡಿ ದಂದೇಕೋರನೋಬ್ಬ ಮಹಿಳೆಗೆ ಪ್ರತಿನಿತ್ಯ ಕಿರುಕುಳ ನೊಂದ ಮಹಿಳೆಯಿಂದ ಮಹಿಳಾ ಅಯೋಗಕ್ಕೆ ದೂರು.

ಇದೀಗ ಬಂದ ಸುದ್ದಿ

ಬಡ್ಡಿ ದಂದೇಕೋರನೋಬ್ಬ ಮಹಿಳೆಗೆ ಪ್ರತಿನಿತ್ಯ ಕಿರುಕುಳ ನೊಂದ ಮಹಿಳೆಯಿಂದ ಮಹಿಳಾ ಅಯೋಗಕ್ಕೆ ದೂರು.

ಬೆಂಗಳೂರು : ದುಪನಹಳ್ಳಿ ಇಂದಿರಾನಗರದಲ್ಲಿ ಕಳೆದ 30 ವರ್ಷದಿಂದ ವಾಸಿಸುತ್ತಿದ್ದ ಲಕ್ಷ್ಮಿ,ರಾಣಿ,ಸುಗುಣಾ ಮತ್ತು ಮುತ್ತಮ್ಮ ಎಂಬ ಮಹಿಳೆಯರು ಬಾಡಿಗೆಗೆ ಮನೆಯಲ್ಲಿ ವಾಸಮಾಡುತ್ತಿದ್ದರು ಈ ಸ್ಥಳಕ್ಕೆ ಬಂದಂತಹ ಬಡ್ಡಿ ನಾರಾಯಣ್ಣಪ್ಪ ಎಂಬ ವ್ಯಕ್ತಿಯ ನೀವು ವಾಸಿಸುವ ಸ್ಥಳವನ್ನು ನಾನು ಕರಿದಿಸಿದ್ದೇನೆ ಹಾಗೂ ನೀವು ಇಲ್ಲಿ ಇರಬೇಕಾದರೆ ನೀವು ನಾನು ಹೇಳಿದಂತೆ ಕೇಳಬೇಕು.

ಎಂದು ದಿನ ನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೆಣ್ಣು ಮಕ್ಕಳೆಂದು ನೋಡದೆ ಕೆಟ್ಟ ಕೆಟ್ಟ ಮಾತುಗಳಿಂದ ನಿಂದಿಸುತ್ತಾ ನಾನು ಹೇಳಿದ ಹಾಗೆ ನಾನು ಹೇಳಿದ ಜಾಗಕ್ಕೆ ನೀನು ಬರಬೇಕು ಎಂದು ನಮ್ಮ ಜೊತೆಯಲ್ಲಿ ಇರುವ ಲಕ್ಷ್ಮೀ ಎಂಬುವರಿಗೆ ಕಿರುಕುಳ ಕೊಡುತ್ತಿದ್ದರು
ಹಾಗೂ ಈ ಎಸ್ ರಾಜಣ್ಣ ಎಂಬುವರು ಬಡ್ಡಿ ವ್ಯಾಪಾರ ಮಾಡುತ್ತಿದ್ದರು.

ಬಡವರ ಆಸ್ತಿ ಪಾಸ್ತಿಗಳಿಗೆ ಸುಳ್ಳು ದಾಖಲೆಗಳನ್ನು ಮಾಡಿಕೊಂಡು ಸ್ಥಳೀಯ ಪ್ರಬಲ ರಾಜಕೀಯ ವ್ಯಕ್ತಿಗಳು ಹಾಗೂ ಪೊಲೀಸರ ಸಹಾಯದಿಂದ ಆಕ್ರಮಿಸಿಕೊಂಡು ಬಡ ಹೆಣ್ಣು ಮಕ್ಕಳನ್ನು ಅವನಿಗಿಷ್ಟವಾದ ಹಾಗೆ ನಡೆದುಕೊಂಡು ನಮಗೆ ಕಿರುಕುಳ ಕೊಡುತ್ತಾರೆ ಎಂದು ನೊಂದ ಮಹಿಳೆಯರು ಆರೋಪಿಸಿದ್ದಾರೆ ಈ ವಿಚಾರವಾಗಿ ನಮ್ಮ ಮಾಲೀಕರಾದ ಕುಪ್ಪ ಸ್ವಾಮಿ ಮಾಹಿತಿ ನೀಡಿದ್ದು ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.

ಆದರೆ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ಕೂಡ ಅವರ ಬೆಂಬಲಕ್ಕೆ ನಿಂತಿದ್ದು

ರಾಜಣ್ಣ ಹಾಗೂ ಆತನ ಹೆಂಡತಿ ಶಶಿಕಲಾ ಹಾಗೂ 50 ರಿಂದ 60 ಜನ ಗಾಡಿಗಳಿಂದ ಸ್ಥಳಕ್ಕೆ ಬಂದು ಏಕಾಏಕಿ ನಮ್ಮಗಳ ಮೇಲೆ ದೌರ್ಜನ್ಯ ದಿಂದ ಹಲ್ಲೆ ಮಾಡಿ ನಮ್ಮನ್ನು ಎಳೆದು ಹೊರಹಾಕಿ ಇಷ್ಟಬಂದಂತೆ ನಮ್ಮನ್ನು ಎಳದಾಡಿ ನಮ್ಮ ಮನೆಗಳನ್ನು ಕೇಡವಿ ನಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯ ದೊರಕಿಸಿ ಕೊಡುವಂತೆ ಮಹಿಳಾ ಅಯೋಗದ ಮೊರೆ ಹೋಗಿದ್ದಾರೆ. ಇನ್ನ ಮನೆಗಳ ಮಾಲೀಕ ದಿ ನ್ಯೂಸ್ 24 ಜೋತೆ ಮಾತನಾಡಿದ ಮಂಜು ನಾವು ನಮ್ಮ ಸೈಟ್‌ನಲ್ಲಿ ಮನೆಗಳನ್ನು ನಿರ್ಮಿಸಿ ಬಾಡಿಗೆ ಕೊಟ್ಟಿದ್ದೇವು ಅದರೆ ಅದು ನಮ್ಮದು ಅಂತ ಹೇಳಿ‌ ರೌಡಿಗಳು ಮತ್ತು ಪೊಲೀಸರ ಜೋತೆ ಬಂದು ನಮ್ಮ ಮನೆಗಳಲ್ಲಿ ಬಾಡಿಗೆಗೆ ಇದ್ದವರ ಮೇಲೆ ಹಲ್ಲೆ ಮಾಡಿ ಜೆಸಿಬಿ‌ ಮತ್ತು ಟ್ರಾಕ್ಟರ್ ಗಳ ಮೂಲಕ ಮನೆಗಳನ್ನು ಧ್ವಂಸ ಮಾಡಿ ನಮಗೆ ತುಂಬಾ ಅನ್ಯಾಯ ಮಾಡಿದ್ದು ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲು ಹೊದರೆ ಪೊಲೀಸರು ಕೂಡ ಅವರ ಪರವಾಗಿದ್ದ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img