Friday, July 30, 2021
Homeಜಿಲ್ಲೆರಾಯಚೂರುವಾಹನ ಅಡ್ಡಗಟ್ಟಿ ಚಾಕು ತೋರಿಸಿ ದರೋಡೆಗೆ ಯತ್ನ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿ ಹಿಡಿದ...

ಇದೀಗ ಬಂದ ಸುದ್ದಿ

ವಾಹನ ಅಡ್ಡಗಟ್ಟಿ ಚಾಕು ತೋರಿಸಿ ದರೋಡೆಗೆ ಯತ್ನ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿ ಹಿಡಿದ ಕಾಂಗ್ರೆಸ್ ಯುವ ಮುಖಂಡ..!

ರಾಯಚೂರ: ವಾಹನ ಅಡ್ಡಗಟ್ಟಿ ಚಾಕು ತೋರಿಸಿ ಹಣ ದೋಚಲು ಮುಂದಾದ ಖದೀಮ ಕಳ್ಳರನ್ನು ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಕಾಂಗ್ರೆಸ್ ಯುವ ಮುಖಂಡನ ಯಶಸ್ವಿ ಕಾರ್ಯಚರಣೆಯೊಂದು ನಡೆದಿದೆ. ಜಿಲ್ಲೆಯ ಮಾನ್ವಿ ತಾಲ್ಲೂಕಿನ ನಿಲೋಗಲ್ ಗ್ರಾಮದ ಹೂರವಲಯದಲ್ಲಿ ರಾಯಚೂರಿನತ್ತ ಬರುತ್ತಿದ ಹಾಲಿನ ವಾಹನವನ್ನು. ನಾಲ್ವರು ಖದೀಮರ ಗುಂಪು ಹಾಲಿನ ಡೈರಿ ವಾಹನವನ್ನು ಅಡ್ಡಗಟ್ಟಿ ಡ್ರೈವರ್ ಹಾಗೂ ಕ್ಲೀನರ್​ಗೆ ಚಾಕುವಿನಿಂದ ಬೆದರಿಸಿ ಹಣ ದೊಚ್ಚಿ‌ಕೊಂಡು ಪರಾರಿಯಾಗಿದ್ದಾರೆ. ಗುರುಗುಂಟಾ ಗ್ರಾಮದ ವಾಹನ ಮಾಲೀಕ ಪರಶುರಾಮ್ ರವರಿಗೆ ಸೇರಿದ 1.48 ಲಕ್ಷ ರೂ.ಹಾಲಿನ ಹಣವನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದೇ ಮಾರ್ಗದಲ್ಲಿ ಹಟ್ಟಿಯಿಂದ ರಾಯಚೂರಿಗೆ ತೆರಳುತ್ತಿದ್ದ ಹಟ್ಟಿ ಜಿಪಂ ಸದಸ್ಯೆ ಸಹಾರ ಬೇಗಂ ಪುತ್ರ ಹಾಗೂ ಕಾಂಗ್ರೆಸ್​ನ ಯುವ ಮುಖಂಡ ಅಮ್ಜದ್ ಸೇಠ್, ಖದೀಮರನ್ನ ಸೆರೆ ಹಿಡಿಯಲು ತಮ್ಮ ಕಾರಿನಿಂದ ಕಳ್ಳರ ಬೆನ್ನತ್ತಿದ್ದಾರೆ.ಹಣ ಲಪಟಾಯಿಸಿಕೊಂಡು ಹೋಗುತ್ತಿದ ಖದೀಮರು ಚೇಸ್ ಮಾಡುತ್ತಿದ ಕಾರಿಗೆ ಕಲ್ಲು ಎಸೆದರು ಆದಾವುದನ್ನ ಲೆಕ್ಕಿಸದೆ ಸಿನಿಮಿಯ ರೀತಿಯಲ್ಲಿ ಖದೀಮರ ವಾಹನ ಚೇಸ್ ಮಾಡಿ ಗಣದಿನ್ನಿ ಗ್ರಾಮಸ್ಥರ ಸಹಾಯದಿಂದ ಸೆರೆ ಹಿಡಿದಿದ್ದಾರೆ. ಸೆರೆ ಸಿಕ್ಕ ಖದೀಮರನ್ನು ಗಣದಿನ್ನಿ ಗ್ರಾಮಸ್ಥರು ಹಿಗ್ಗಮುಗ್ಗಾ ಥಳಿಸಿ, ಬಳಿಕ ಸಿರವಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರು ಶಿವಮೊಗ್ಗ ಮೂಲದವರೆಂಬ ಮಾಹಿತಿ ತಿಳಿದು ಬಂದಿದೆ‌,ಪ್ರಕರಣಕ್ಕೆ ಸಂಭಂದಿಸಿದಂತೆ ಸಿರವಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ…..

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img