Tuesday, January 19, 2021
Home ಜಿಲ್ಲೆ ಮಂಡ್ಯ ಕಾಂಗ್ರೆಸ್ ಮತಗಳನ್ನು ಸೆಳೆಯಲು ಮುಂದಾದ ಅಂಬಿ ಪತ್ನಿ.

ಇದೀಗ ಬಂದ ಸುದ್ದಿ

ಕಾಂಗ್ರೆಸ್ ಮತಗಳನ್ನು ಸೆಳೆಯಲು ಮುಂದಾದ ಅಂಬಿ ಪತ್ನಿ.

ಮಂಡ್ಯ : ಸ್ಪರ್ಧೆ ಖಚಿತ ಪಡಿಸಿದ ಸುಮಲತಾ ನಾನು ಸ್ಪರ್ಧೆ ಮಾಡದೇ ಇದ್ರೆ ನನಗೆ ಮಾನವೀಯತೆ ಇರೋದಿಲ್ಲ ನಾವು ಇಷ್ಟು ದಿನ ಅಂಬರೀಶಣ್ಣನ ಕೈ ಹಿಡಿದಿದ್ದೆವು ಈಗ,ನೀವು ನಮ್ಮ ಕೈ ಬಿಡಬೇಡಿ ಎಂದು ಇಲ್ಲಿನ ಜನ ಹೇಳುವಾಗ ಚುನಾವಣೆಗೆ ಸ್ಪರ್ಧಿಸದಿದ್ದರೆ ನಮಗೆ ಮಾನವೀಯತೆ ಇರುವುದಿಲ್ಲ. ನಾಗಮಂಗಲದಲ್ಲಿ ಸುಮಲತಾ ಹೇಳಿಕೆ. ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದ ಸುಮಲತಾ ನಾಗಮಂಗಲದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರನ್ನುದ್ದೇಶಿಸಿ ಹೇಳಿಕೆ ಮಂಡ್ಯದಿಂದ ಸ್ಪರ್ಧೆ ಮಾಡುವ ಬಗೆಗೆ ಕಾಂಗ್ರೆಸ್ ನಾಯಕರನ್ನ ಕೇಳಿದರೆ ಅವರ ಹೆಸರು ಹೇಳುವುದು ಬೇಡ. ಅವರು ಹೇಳ್ತಾರೆ ನಾವು ಮೈತ್ರಿ ಧರ್ಮ ಪಾಲಿಸಬೇಕಿದೆ. ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟು ಕೊಡಬೇಕಿದೆ ಎನ್ನುತ್ತಾರೆ. ಮಂಡ್ಯವೇ ನಿಮಗೆ ಯಾಕೆ ಬೇಕು ಬೆಂಗಳೂರು ಉತ್ತರ ಅಥವಾ ದಕ್ಷಿಣ ಯಾವುದಾದ್ರು ಕ್ಷೇತ್ರದಿಂದ ಸ್ಪರ್ಧಿಸಿ ಎನ್ನುತ್ತಾರೆ. ನೀವು ಚುನಾವಣೆಗೆ ಸ್ಪರ್ಧೆ ಮಾಡುವುದೇ ಬೇಡ ನಿಮಗ್ಯಾವುದಾದ್ರು ಸ್ಥಾನ ನೀಡ್ತಿವಿ ಎನ್ನುತ್ತಾರೆ ಅಂಬರೀಶ್ ಅವರನ್ನ ಕಾಂಗ್ರೆಸ್ ಪಕ್ಷ 2 ಬಾರಿ ಮಿನಿಸ್ಟರ್ ಅನ್ನಾಗಿ ಮಾಡಿದೆ. ಹಾಗಾಗಿ ನಮಗೆ ಪಕ್ಷದ ಮೇಲೆ ನಿಯತ್ತಿದೆ‌‌. ಹಾಗಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಾದ್ರೆ ಅದು ಮಂಡ್ಯದಿಂದ ಮಾತ್ರ ಎಂದು ಹೇಳಿ ಬಂದಿದ್ದೇನೆ. ಮುತ್ತೇಗೆರೆಗೆ ಸುಮಲತಾ ಆಗಮನ ಮನೆ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದ ಸುಮಲತಾ ಮುತ್ತೇಗೆರೆ ಮಾಯಮ್ಮ ಅಂಬಿ ಮನೆ ದೇವರು ಮಂಡ್ಯ ತಾಲೂಕಿನ ಬಸರಾಳು ಸಮೀಪವಿರುವ ಮುತ್ತೇಗೆರೆ ಗ್ರಾಮ ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು, ಬೆಂಬಲಿಗರು ಸುಮಲತಾಗೆ ಪುತ್ರ ಅಭಿಷೇಕ್ ಗೌಡ ಸಾಥ್ ಅಂಬರೀಶ್, ಸುಮಲತಾ, ಅಭಿಷೇಕ್ ಪರ ಮೊಳಗಿದ ಘೋಷಣೆ

TRENDING