ಬಿಎಸ್ ವೈ ಡೈರಿ ಬಗ್ಗೆ ಕುಟುಕಿದ ರಾಹುಲ್ ಗಾಂಧಿ – ಚೌಕಿದಾರ್ ವಿರುದ್ಧ ತೀವ್ರ ವಾಗ್ದಾಳಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನ ಸಮಾವೇಶದಲ್ಲಿ ಬಿಎಸ್ ವೈ ಡೈರಿ ಬಗ್ಗೆ ಪ್ರಸ್ತಾಪಿಸಿದ್ರು. ಮಾಜಿ ಸಿಎಂ ಯಡಿಯೂರಪ್ಪ 1,800 ಕೋಟಿ ರೂ ಹಣವನ್ನು ಕೇಂದ್ರದ ನಾಯಕರುಗಳಿಗೆ ಸಂದಾಯ ಮಾಡಿದ್ದಾರೆ. ಅದೆಲ್ಲ ಎಲ್ಲಿಂದ ಬಂತು? ಅದೆಲ್ಲ ಯಾರಿಗೆ ಸೇರಿದ್ದು ಗೊತ್ತಾ? ಅದು ಕರ್ನಾಟಕದ ರೈತರ ಜೇಬಿಂದ ತೆಗೆದುಕೊಂಡ ಹಣ ಎಂದು ಹೇಳೋ ಮೂಲಕ ಕುಟುಕಿದ್ರು.

ನರೇಂದ್ರ ಮೋದಿ ಚೌಕಿದಾರರು ಎಂದು ಹೇಳಿಕೊಂಡು ತಮ್ಮ 20-30 ಮಿತ್ರರಿಗೆ ಮಾತ್ರ ನೆರವು ನೀಡಿದರು. ಅನಿಲ್​ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿ ನೀಡಿದರು. ಇದು ಪ್ರಧಾನಿ ಮೋದಿಯ ನೀತಿಯಾಗಿದೆ. ಆದೇ ರೈತರ ಸಾಲ ಮನ್ನಾ ಮಾಡಿ ಅಂದ್ರೆ ಹಣ ಎಲ್ಲಿಂದ ತರಬೇಕು? ಎಂದು ಪ್ರಶ್ನಿಸುತ್ತಾರೆ. ಅದೇ ಕರ್ನಾಟಕದಲ್ಲಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದ್ರು. ಮೋದಿ ಶ್ರೀಮಂತರಿಗೆ ಸಹಾಯ ಮಾಡಿದ್ರೆ, ನಾವು ನಮ್ಮ ನ್ಯಾಯ್ ಸ್ಕೀಂನಿಂದ ಬಡತನ ರೇಖೆಗಿಂತ ಕೆಳ ಸ್ಥರದಲ್ಲಿರೋ ಶೇ.20 ಕುಟುಂಬಗಳಿಗೆ ವಾರ್ಷಿಕ ₹72 ಸಾವಿರ ಹಣ ನೀಡೋದಾಗಿ ರಾಗಾ ಆಶ್ವಾಸನೆ ನೀಡಿದ್ರು.