ತೇಜಸ್ವಿ ಸೂರ್ಯಗೆ ಸಂಕಷ್ಟ – ಮಹಿಳಾ ಆಯೋಗದಿಂದ ನೋಟಿಸ್

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದೆ. ಏಪ್ರಿಲ್ 3 ರಂದು ಮಧ್ಯಾಹ್ನ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿ ಸೂಚಿಸಿದೆ. ಟ್ವಿಟ್ಟರ್​​ನಲ್ಲಿ ಮಹಿಳೆಯೊಬ್ಬರು ತೇಜಸ್ವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಆಧಾರ ಕಾಂಗ್ರೆಸ್ ಮಹಿಳಾ ಘಟಕ ತೇಜಸ್ವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ದೂರಿನನ್ವಯ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ  ಅಖಾಡಕ್ಕಿಳಿದಿರುವ ತೇಜಸ್ವಿಸೂರ್ಯಗೆ ಇದು ನುಂಗಲಾರದ ತುತ್ತಾಗಿದೆ.