ರಾಜಕೀಯ

ಸಿಎಂ ಬಿಎಸ್ ವೈಗೆ ಯಶ್ ಓಪನ್ ರಿಕ್ವೆಸ್ಟ್ ..!

ಸಿನಿಮಾನ ಕಾಯ ವಾಚ ಮನಸ ಇಷ್ಟ ಪಡೋ ಯಶ್, ಅದಕ್ಕಾಗಿ ಹಗಲಿರುಳು ದುಡೀತಾರೆ. ಅದ್ರ ಪ್ರತಿಫಲವೇ ಇವತ್ತು ಯಶ್ ಅಗ್ರಸ್ಥಾನಕ್ಕೇರಿರೋದು ಅಂದ್ರೆ ಅತಿಶಯೋಕ್ತಿ ಆಗದು. ಚಿಕ್ಕವಯಸ್ಸಿನಲ್ಲೇ ಯಶ್​ರನ್ನ ಆವರಿಸಿದ ಸಿನಿಮಾ, ಸ್ಫೂರ್ತಿಯ ಜೊತೆ ಅನ್ನ, ಜೀವನ ಹಾಗೂ ಸಮಾಜದಲ್ಲೊಂದು ಸ್ಥಾನ ಕೊಟ್ಟಿದೆ. ಅದನ್ನ ಸದುಪಯೋಗ ಪಡಿಸಿಕೊಂಡಿರೋ ಯಶ್ ಕೂಡ ಇಂದು ಚಿತ್ರರಂಗದ ಏಳಿಗೆಗಾಗಿ ದುಡೀತಾ ಇದ್ದಾರೆ.ಅದೇ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಬಿಎಸ್​ವೈಗೆ ಯಶ್ ಓಪನ್ ರಿಕ್ವೆಸ್ಟ್ ಮಾಡೋ ಮೂಲಕ ಗಮನ ಸೆಳೆದರು. ಅದೇನಪ್ಪಾ ಅಂದ್ರೆ, ಕರ್ನಾಟಕದ ಅದೆಷ್ಟೋ ಮಂದಿ ಸಿನಿಮೋತ್ಸಾಹಿ ಯುವಕರಿಗೆ ಸಾಕಷ್ಟು ಸಿನಿಮಾ ಕನಸು, ಹುರುಪು– ಹುಮ್ಮಸ್ಸಿದೆ. ಹಾಗಾಗಿ ದೊಡ್ಡದೊಂದು ಫಿಲ್ಮ್ ಸ್ಟುಡಿಯೋ ಕಟ್ಟಿಸಿಕೊಡಿ ಅಂತ ಮನವಿ ಮಾಡಿದ್ರು. ಎಲ್ಲೋ ಬೇರೆ ರಾಜ್ಯಗಳಲ್ಲಿ ಹೋಗಿ ಶೂಟಿಂಗ್ ಮಾಡ್ಕೊಂಡ್ ಬರೋ ಬದಲು, ನಮ್ಮ ಸ್ಟುಡಿಯೋಗಳಲ್ಲೇ ಮಾಡಿದ್ರೆ, ಅದು ಸಾಕಷ್ಟು ಸಹಕಾರಿ ಆಗಲಿದೆ. ನೀವು ಆ ಶಕ್ತಿ ಕೊಟ್ರೆ, ನಾವು ಟ್ಯಾಕ್ಸ್ ರೂಪದಲ್ಲಿ ರಿಟರ್ನ್​ ಕೊಟ್ಟೇ ಕೊಡ್ತೀವಿ ಅನ್ನೋ ಭರವಸೆ ಕೂಡ ಕೊಟ್ರು ರಾಕಿಭಾಯ್. ಏನೂ ಇಲ್ಲದೇನೇ ನಾವು ಪರಭಾಷಿಗರಿಗೆ ಸೆಡ್ಡು ಹೊಡೀತಿದ್ದೀವಿ ಅಂದ್ರೆ, ಇನ್ನು ಎಲ್ಲಾ ಅವಕಾಶಗಳು ನಮಗೆ ಸುಗಮವಾದ್ರೆ ಯಾವ ರೇಂಜ್​ಗೆ ಇರಲಿದೆ ಅನ್ನೋದು ಊಹಿಸಿಕೊಳ್ಳಬೇಕಿದೆ ಅನ್ನೋದು ಯಶ್​ರ ಮಾತಿನ ತಾತ್ಪರ್ಯವಾಗಿತ್ತು. ಅದೇನೇ ಇರಲಿ, ಒಬ್ಬ ಸ್ವಾಭಿಮಾನಿ ಕನ್ನಡಿಗ ಸೂಪರ್ ಸ್ಟಾರ್ ಆದರೂ, ಕನ್ನಡ ಮೇಲಿನ ಈ ರೀತಿಯ ಶ್ರದ್ಧೆ, ನಿಷ್ಠೆ ಹಾಗೂ ಅಭಿಮಾನಕ್ಕೆ ಎಂಥವರೂ ಶಹಬ್ಬಾಶ್ ಅನ್ನಲೇಬೇಕು. ಇನ್ನು ಇಷ್ಟು ದಿನ ಬರೀ ಮಾತಿಗೆ ಸೀಮಿತವಾಗಿದ್ದ ಫಿಲ್ಮ್ ಸ್ಟುಡಿಯೋ ಕನಸು ಇನ್ನಾದ್ರು ನನಸಾಗುತ್ತಾ..? ಯಡಿಯೂರಪ್ಪ ಸರ್ಕಾರ ಇದನ್ನ ಎಷ್ಟು ಗಂಭೀರವಾಗಿ ಪರಿಗಣಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಹೆಚ್ ಡಿ.ಕೆ ಅವರಿಗೆ ಪ್ರಶಾಂತ್ ಕಿಶೋರ್ ಹಾಕಿರುವ ಷರತ್ತು..!

ಬೆಂಗಳೂರು: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಗೆಲುವು, ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ಜಯಭೇರಿಯಿಂದ ಪ್ರೇರಣೆ ಪಡೆದಿರುವ ಜೆಡಿಎಸ್…

ಬಜೆಟ್ ಅಧಿವೇಶನದ ನಂತ್ರ ಉಮೇಶ್ ಕತ್ತಿ ಸೇರಿ ಮೂವರು ಸಂಪುಟಕ್ಕೆ ಸೇರ್ಪಡೆ

ನವದೆಹಲಿ : ಶಾಸಕ ಉಮೇಶ್ ಕತ್ತಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಗಾಗ ಬಂಡಾಯ ಏಳುತ್ತಿದ್ದರು….

ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿರವರಿಗೆ ಕ್ಲೀನ್ ಚಿಟ್ ನೀಡಿದ ಪೊಲೀಸರು

ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಅವರ ಹೆಸರು ಎಫ್‍ಐಆರ್ ನಲ್ಲಿ ಉಲ್ಲೇಖಗೊಂಡಿರುವ ಹೊರತಾಗಿಯೂ…

ಮಾ. 2ರಂದು ಸಿಎಂ ಯಡಿಯೂರಪ್ಪರಿಂದ ಉತ್ತರ- ಸ್ಪೀಕರ್ ಘೋಷಣೆ

ಬೆಂಗಳೂರು: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂಬ ವಿಪಕ್ಷಗಳ ಒತ್ತಡಕ್ಕೆ ಮಣಿದ ಸಭಾಧ್ಯಕ್ಷ ವಿಶ್ವೇಶ್ವರ…

ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಉತ್ತರ ಪ್ರದೇಶದ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರ ವಾರಾಣಸಿಗೆ ಭೇಟಿ

ಬೆಂಗಳೂರು : ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಉತ್ತರ ಪ್ರದೇಶದ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರ ವಾರಾಣಸಿಗೆ ಭೇಟಿ…

ನೂತನ ಸಚಿವರಿಗೆ ಖಾತೆ ಹಂಚಿಕೆ ಪೂರ್ಣ : ರಾಜ್ಯಪಾಲರಿಂದ ಅಧಿಕೃತ ಅಂಕಿತ

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿ ರಾಜ್ಯಪಾಲರಿಂದ ಅಧಿಕೃತ ಅಂಕಿತ ಬಿದ್ದಿದೆ. ನೂತನ ಸಚಿವರಿಗೆ ಹಂಚಿಕೆಯಾಗಿರುವ ಖಾತೆ ಈ ಕೆಳಗಿನಂತಿವೆ….

error: Content is protected !!