ಬೆಳಗಾವಿ : ಪ್ರವಾಹ ಸಂತ್ರಸ್ತರಿಗೆ ವಿವಿಧ ಸಂಸ್ಥೆಗಳು ಹಾಗೂ ಮಠಾಧೀಶರಿಂದ ನೆರವು

ಗೋಕಾಕ್ : ತಾಲ್ಲೂಕಿನ ಕೊಣ್ಣೂರು ಪಟ್ಟಣದ ಅಂಬೇಡ್ಕರ್ ನಗರ, ಪದ್ಮಾನಗರ ಹಾಗೂ ಮಹಾವೀರ ನಗರ ಬಡಾವಣೆಗಳ ಪ್ರವಾಹ ಸಂತ್ರಸ್ತರ ನೇರವಿಗೆ ಮಠಾದೀಶರು ಹಾಗೂ ಕಾಲೇಜು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಪುರಸಭೆ ಮಾಜಿ ಸದಸ್ಯ ದನ್ಯಕುಮಾರ್ ಮೇಗೇರಿ ಅವರಿಂದ ಪ್ರವಾಹ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಯಿತು.

ಬೆಳಗಾವಿಯ ಜೆ.ಎಸ್.ಎಸ್ ಕಾಲೇಜ್ ಆಫ್ ಕಾಮರ್ಸ್ ವಿದ್ಯಾರ್ಥಿಗಳು ಸಹ ಸಂತ್ರಸ್ತರು ಇರುವಲ್ಲಿಗೆ ತೆರಳಿ ಹಾಸಿಗೆ, ಹೊದಿಕೆ ನೀಡಿ ಮತ್ತೆ ಬೇಕಾಗುವ ಅವಶ್ಯಕತೆಯನ್ನು ಕಾಲೇಜಿನ ಮುಖ್ಯಸ್ಥರ ಜೊತೆ ಮಾತಾಡಿ ಪೊರೈಸುತ್ತೇವೆ ಎಂದು ಭರವಸೆ ನೀಡಿದರು‌. ಅಲ್ಲದೇ ಸಂತ್ರಸ್ತರಿಗೆ ದೈರ್ಯ ತುಂಬುವುದರ ಮೂಲಕ ವಿದ್ಯಾರ್ಥಿಗಳು ಮಾನವಿಯತೆ ಮೆರೆದಿದ್ದಾರೆ.

ಮರಡಿಮಠದ ಸ್ವಾಮಿಗಳಾದ ಜಗದ್ಗುರು ಮಘಚ ಶ್ರೀ.ಕಾಡಶೀದ್ದೇಶ್ವರ ಅವರು ನಿರಾಶ್ರಿತರಿಗೆ 10 ಚೀಲ ಅಕ್ಕಿ, ಹಾಸಿಗೆ, ಹೋದಿಕೆ ಸೇರಿದನಮತೆ ಇಥ ಅಗತ್ಯ ವಸ್ತುಗಳನ್ನು ನೀಡಿದರು. ಅಲ್ಲದೇ ವೈದ್ಯರನ್ನು ಕರೆಯಿಸಿ ನಿರಾಶ್ರಿತರ ಆರೋಗ್ಯ ತಪಾಸಣೆ ಮಾಡಿಸಿದರು.

ಇದೇ ರೀತಿ ಹುಬ್ಬಳ್ಳಿಯ ಗೆಳೆಯರ ಬಳಗವು ಇಲ್ಲಿನ ಪರಿಸ್ಥಿತಿ ಅರಿತು ಎಲ್ಲರಿಗೂ ಊಟ ಹಾಗೂ ಶುದ್ಧ ಕುಡಿಯುವ ನೀರು ಪೊರೈಸಿ ಸಂತ್ವಾನ ಹೇಳಿದರು. ಹೀಗೆ ಬೆಂಗಳೂರು ಮತ್ತು ಶಿರಸಿಯ ರೇಡ್ ಹ್ಯಾಂಡ್ ಸಂಸ್ಥೆ, ಹುಬ್ಬಳಿಯ ಜೆ.ಎಸ್.ಕೆ.ಎಚ್ ಹಾಗೂ ಬೆಲಕಗಾವಿಯ ಹ್ಯೂಮನ್ ರೈಟ್ಸ್ ಸಂಸ್ಥೆಯವರು ಸಹ ಪ್ರವಾಹ ಪೀಡಿತರಿಗೆ ಸಹಾಯಹಸ್ತ ಚಾಚಿದರು.

Share Post

Leave a Reply

Your email address will not be published. Required fields are marked *

error: Content is protected !!