ನೆರವಿಗೆ ಬಾರದ ಸಂಸದ ಪಿ.ಸಿ.ಗದ್ದಿಗೌಡರ್ ವಿರುದ್ಧ ಸಂತ್ರಸ್ತರು ಶಾಪ

ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ವಿವಿಧ ಗ್ರಾಮಗಳು ಜಲಾವೃತವಾಗಿದ್ದು ಸಂಸದ ಪಿಸಿ ಗದ್ದಿಗೌಡರ್ ಸಂತ್ರಸ್ತರ ನೆರವಿಗೆ ಬಾರದೆ ಜನತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಿಪ್ಪರಗಿ, ಆಸಂಗಿ, ತಮದಡ್ಡಿ, ಹಳಿಂಗಳಿ, ಮಾರಾಪುರ, ನಂದಗಾವ ಸೇರಿದಂತೆ ಹಲವು ಗ್ರಾಮಗಳ ಜನರು ಮನೆ-ಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಂತ್ರಸ್ತರ ನೆರವಿಗೆ ಬಾರದ ಪಿ ಸಿ ಗದ್ದಿಗೌಡರ್ ಇನ್ಯಾವಾಗ ಬರುತ್ತಾರೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ‌.

ಸುಮಾರು 15 ದಿನಗಳಿಂದ ಧಾರಾಕಾರ ಮಳೆಗೆ ಜನರು ತತ್ತರಿಸಿ ಹೋಗಿದ್ದು ಬೀದಿ ಪಾಲಾಗಿದ್ದಾರೆ. ಸಂತ್ರಸ್ತರಿಗೆ ಬೇಕಾದ ಅಗತ್ಯ ಮೂಲಸೌಕರ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಜನನಾಯಕರು ಗಮನ ಹರಿಸಬೇಕಿದ್ದು ಇನ್ನು ಮುಂದೆಯಾದರೂ ಸಂತ್ರಸ್ತರ ನೆರವಿಗೆ ಬಂದು ಅವರ ಕಷ್ಟ ಪರಿಹಾರ ಮಾಡಬೇಕೆಂದು ಸಂತ್ರಸ್ತರು ವಿನಂತಿಸಿದ್ದಾರೆ.

  • ಪ್ರಕಾಶ ಕುಂಬಾರ, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!