ಅನುಚಿತ ವರ್ತನೆ ಪ್ರಶ್ನಿಸಿದ ಪೊಲೀಸರಿಗೆ ಗನ್ ತೋರಿಸಿ ಬೆದರಿಕೆ

ಹುಬ್ಬಳ್ಳಿ : ನಗರದ ರೈಲ್ವೆ ಸ್ಟೇಶನ್ ಬಳಿ ಯುವಕನೊರ್ವ ರೈಲ್ವೆ ಪೊಲೀಸರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

ರೈಲ್ವೆ ಸ್ಟೇಶನ್ ಬಳಿ ಶರೀಫ್ ಎಂಬ ಯುವಕನೊಬ್ಬ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಎನ್ನಲಾಗಿದ್ದು ಇದನ್ನು ಪ್ರಶ್ನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿಗೆ ತನ್ನ ಬಳಿ ಇದ್ದಂತಹ ಬಂದೂಕು ತೋರಿಸಿ ಬೆದರಿಸಿ ಆವಾಜ್ ಹಾಕಿದ್ದಾನೆ.

ಪೊಲೀಸರಿಗೆ ಬೆದರಿಕೆಯೊಡ್ಡಲು ಯುವಕ ಬಳಸಿದ ಗನ್ ಹಾಗೂ ಗುಂಡುಗಳು

ಈ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಹುಬ್ಬಳ್ಳಿ ಟೌನ್ ಪೊಲೀಸರು ಶರೀಫ್‌ನನ್ನು ವಶಕ್ಕೆ ಪಡೆದು ಆತನ ವಿರುದ್ಧ ಪ್ರಕರಣ ದಾಖಲಿಸಿ ಆತನ ಹಿನ್ನಲೆ ಏನೆಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!