ಬಾಗಲಕೋಟೆ : ಹಲವು ಗ್ರಾಮಗಳಿಗೆ ಜನಸಂಚಾರ ಸ್ಥಗಿತ

ಬಾಗಲಕೋಟೆ : ಮೈಗೂರ, ಮುತ್ತೂರು, ಕಂಕಣವಾಡಿ ಮತ್ತು ಶಿರಗುಪ್ಪಿ ಗ್ರಾಮದಿಂದ ಜಮಖಂಡಿ ನಗರಕ್ಕೆ ಬರುವ ರಸ್ತೆ ಮಧ್ಯ ಇರುವ ಪೂಲಗಳು ಜಲಾವೃತಗೊಂಡು ಜನಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಮುರಗೇಶ ನೀರಾಣಿ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಸಂಗಮೇಶ ನೀರಾಣಿ, ಹಾಗೂ ಉಪಾಧ್ಯಕ್ಷರಾದ ವಿಜಯ ನೀರಾಣಿ ಯವರ ನಿರ್ದೇಶನದಂತೆ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.

ಕಾಳಜಿ ಕೇಂದ್ರದಲ್ಲಿ ಕಂಕಣವಾಡಿ ಮುತ್ತೂರು, ಮೈಗೂರ, ಶಿರಗುಪ್ಪಿ, ಆಲಬಾಳ ಮತ್ತು ಹಿಪ್ಪರಗಿ ಗ್ರಾಮಗಳ ನೆರೆ ಸಂತ್ರಸ್ತರಿಗೆ ಊಟ, ಅಲ್ಪೋಪಹಾರ, ಶುದ್ಧ ಕುಡಿಯುವ ನೀರು ಹಾಗೂ ವಸತಿ ಮತ್ತು ಔಷಧಿ ವ್ಯವಸ್ಥೆಯನ್ನು ಮಾಡಲಾಗಿದೆ‌. ಸುಮಾರು 300 ಕ್ಕೂ ಹೆಚ್ಚು ಜನರಿಗೆ ಇಲ್ಲಿ ಕಾಳಜಿ ವಹಿಸಲಾಗುತ್ತಿದೆ‌.

ಇದರೊಂದಿಗೆ ಜಮಖಂಡಿಯಿಂದ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ‌. ಕಬ್ಬು ವಾಹನ ನಿಲುಗಡೆ ಸ್ಥಳದಲ್ಲಿ ದನಕರುಗಳನ್ನು ಕಟ್ಟುವ ಮತ್ತು ಅವುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದ್ದು ಇನ್ನೂ ಹೆಚ್ಚಿನ ಸಂತ್ರಸ್ತರು ಬರುವ ನಿರೀಕ್ಷೆಯಿದೆ.

  • ರಮೇಶ ಬೀಳಗಿ, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!