ಮನೆಗಳಿಗೆ ನುಗ್ಗಿದ ಘಟಪ್ರಭಾ ನದಿ ನೀರು : ಜನ-ಜಾನುವಾರು ಸ್ಥಳಾಂತರ
ಗೋಕಾಕ್ : ಹಿಡಕಲ್ ಜಲಾಶಯದಿಂದ 30 ಸಾವಿರ ಕ್ಯೂಸೆಕ್ಸ್ ನೀರನ್ನು ಘಟಪ್ರಭಾ ನದಿಗೆ ಹರಿಬಿಟ್ಟಿದ್ದರಿಂದ ಕೊಣ್ಣೂರ ಪಟ್ಟಣಕ್ಕೆ ನೀರು ನುಗ್ಗಿದ ಪರಿಣಾಮ ಜನರು ತಮ್ಮಮನೆಗಳನ್ನು ಬಿಟ್ಟು ಗಂಜಿಕೇಂದ್ರಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಕೊಣ್ಣೂರಿನ ಅಂಬೇಡ್ಕರ ನಗರ, ಕುಂಬಾರ ಗಲ್ಲಿಯ ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕುಟುಂಬಗಳು ಅಗತ್ಯ ಸಮಾನು ಸರಂಜಾಮು ಸಮೇತ ಹಾಗೂ ಜಾನುವಾರಗಳೊಂದಿಗೆ ಗಂಜಿಕೆಂದ್ರಗಳಿಗೆ ತೆರಳುತ್ತಿದ್ದಾರೆ.
ಅದಲ್ಲದೆ ಕೊಣ್ಣೂರಲ್ಲಿ ಸುಮಾರು ಹದಿನೈದು ಮನೆಗಳು ಮಳೆಯ ಕಾರಣದಿಂದ ನೆಲಸಮವಾಗಿವೆ. ಕೊಣ್ಣೂರ, ದುಪದಾಳ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಪೋಲಿಸ್ ಇಲಾಖೆ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಿದೆ.
ಇನ್ನು ತಮ್ಮವರ ಮನೆಗಳು ಜಲಾವೃತಗೊಂಡಿದ್ದರಿಂದ ಅಂಬೇಡ್ಕರ ನಗರದ ಎಲ್ಲ ಯುವಕರು ಸ್ವಯಂ ಪ್ರೇರಿತವಾಗಿ ಸಂತ್ರಸ್ತರಿಗೆ ಕೊಣ್ಣೂರಿನ ದುರ್ಗಾದೇವಿಯ ಸಮುದಾಯ ಭವನದಲ್ಲಿ ತಂಗುವ ವ್ಯವಸ್ತೆ ಕಲ್ಪಿಸಿದ್ದಾರೆ.
ಎಲ್ಲಿ ಗಂಗಾಮಾತೆಯು ಮುನಿಸುಕೊಂಡಿದ್ದಾಳೆಂದು ತಿಳಿದು ಅಂಬೇಡ್ಕರ್ ನಗರದ ಮುತೈದೆಯರು ಪೂಜೆ ಸಲ್ಲಿಸಿ ಯಾವುದೇ ರೀತಿಯ ಅನಾಹುತವಾಗದಂತೆ ಕಾಪಾಡಲು ಪ್ರಾರ್ಥಿಸಿದರು.
- ಮನೋಹರ ಮೇಗೇರಿ, ದಿ ನ್ಯೂಸ್24 ಕನ್ನಡ