ಮಂಡ್ಯ ಪೋಲಿಸರ ಭರ್ಜರಿ ಭೇಟೆ : ಮೂವರು ಅಂತರರಾಜ್ಯ ಕಳ್ಳರ ಬಂಧನ

ಮಂಡ್ಯ : ನಗರದ ಮೊಬೈಲ್ ಷೋರೂಂಗಳಿಗೆ ಕನ್ನಹಾಕ್ತಿದ್ದ ಮೂವರು ಅಂತರರಾಜ್ಯ ಕಳ್ಳರ ಬೆನ್ನಟ್ಟಿದ್ದ ಮಂಡ್ಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕಬ್ಬಾಳು@ಚಂದು(25), ಅರ್ಜುನ@ಕುಮಾರ್(26), ಚನ್ನಪ್ಪ(20) ಬಂಧಿತ ಆರೋಪಿಗಳುಮ ಬಂಧಿತರಿಂದ 20ಲಕ್ಷ ಮೌಲ್ಯದ 144 ಮೊಬೈಲ್ಸ್ ಫೋನುಗಳು, ಕೃತ್ಯದಲ್ಲಿ ಬಳಕೆಯಾಗಿದ್ದ 1ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನ ವಶ ಪಡಿಸಿಕೊಳ್ಳಲಾಗಿದೆ.

20.07.2019 ರಂದು ನಾಗಮಂಗಲ ಪಟ್ಟಣದಲ್ಲಿರುವ ಸಂಗೀತಾ ಮೊಬೈಲ್ ಷೋರೂಂ ಟಾರ್ಗೆಟ್ ಮಾಡಿದ್ದ ಖದೀಮರು ವಿದ್ಯುತ್ ಕಟರ್ ಬಳಸಿ ಷೋರೂಂ ರೋಲಿಂಗ್ ಶೆಟ್ಟರ್ ಮುರಿದು ಅಪಾರ ಪ್ರಮಾಣದ ವಸ್ತುಗಳನ್ನು ಕಳ್ಳತನ‌ ಮಾಡಿದ್ದರು.

ಚಾಲಾಕಿ ಖದೀಮರು ವಿವಿಧ ಕಂಪನಿಯ 26,23,287 ರೂ ಮೌಲ್ಯದ ಒಟ್ಟು 177 ಮೊಬೈಲ್ ಹ್ಯಾಂಡ್‌ಸೆಟ್ ಹೊತ್ತು ಹೋಗಿದ್ದರು. ಈ ಸಂಬಂಧ ನಾಗಮಂಗಲ ಸಿಪಿಐ ಎಂ.ನಂಜಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣವನ್ನ ಶೀಘ್ರವಾಗಿ ಭೇದಿಸಿದ ಪೋಲಿಸರ ತಂಡಕ್ಕೆ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್ ಬಹುಮಾನ ನೀಡಿ ಅಭಿನಂದಿಸಿದರು.

ಸಂತೋಷ್ ಬಲ್ಲೇನಹಳ್ಳಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!