ಕೊಳ್ಳೇಗಾಲದ ಹೈಟೆಕ್ ಬಸ್‌ನಿಲ್ದಾಣ ಕಾಮಗಾರಿ ವೀಕ್ಷಣೆ ನಡೆಸಿದ ಶಾಸಕ ಎನ್.ಮಹೇಶ್

ಮುಂದಿನ 9 ತಿಂಗಳಲ್ಲಿ ಕಾಮಗಾರಿ ಪೂರ್ಣ : ಶಾಸಕ ಎನ್.ಮಹೇಶ್ ವಿಶ್ವಾಸ

ಕೊಳ್ಳೇಗಾಲ : ನಗರದ ಹೈಟೆಕ್ ಬಸ್‌ನಿಲ್ದಾಣದ ಮೊದಲ ಹಂತದ ಕಾಮಗಾರಿ ಮುಕ್ತಾಯದ ಹಂತಕ್ಕೆ‌ ಬಂದಿದ್ದು ಮುಂದಿನ 9 ತಿಂಗಳೊಳಗೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ನಿಲ್ದಾಣ ತಲೆಯೆತ್ತಲಿದೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.
ಇಂದು ನಿರ್ಮಾಣ ಹಂತದಲ್ಲಿರುವ ಬಸ್‌ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಕಾಮಗಾರಿ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಮಗಾರಿ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ. 11.36 ಕೋಟಿ ವೆಚ್ಚದ ಮೊದಲ ಹಂತದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಎರಡನೇ ಹಂತದ ಕಾಮಗಾರಿಗೆ ಹತ್ತು ಕೋಟಿ ಅನುದಾನ ಬೇಕಿದೆ ಎಂದರು. ಪ್ರಸ್ತುತ ನಾಲ್ಕು ಕೋಟಿ‌ ಹಣವಿದ್ದು ಉಳಿಕೆ ಸುಮಾರು ಆರುವರೆ ಕೋಟಿ ಅಗತ್ಯವಿದೆ ಎಂದರು.
ಸಂಪೂರ್ಣ ಹಣ ಕ್ರೋಢಿಕರಣವಾದಲ್ಲಿ ನಗರದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ತಲೆಯೆತ್ತಲಿದೆ ಎಂದರು. ಇನ್ನೇನು ಮೊದಲ ಹಂತದ ಕಾಮಗಾರಿ ಮುಗಿಯಲಿದ್ದು ಇದನ್ನು ಹಾಗೆಯೇ ಇಟ್ಟು ಮುಂದಿನ ಒಂಭತ್ತು ತಿಂಗಳೊಳಗೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಿದ ನಂತರವಷ್ಟೇ ಉದ್ಘಾಟನೆ ಮಾಡುವ ಆಲೋಚನೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರುಗಳಾದ ಜಯಂತ್, ರಾಮಕೃಷ್ಣ, ಜಯಮರಿ, ನಾಸೀರ್‌ಷರೀಫ್, ಪ್ರಕಾಶ್, ಕೆಎಸ್‌ಆರ್‌ಟಿಸಿ ಇನ್ಚಾರ್ಜ್ ಮಹೇಶ್, ನಗರಸಭಾ ಜೆಇ ನಾಗೇಂದ್ರ, ಇಂಜಿನಿಯರ್ ವಿನೋದ್, ಬಿಎಸ್ಪಿ ಮುಖಂಡರಾದ ಸೋಮಣ್ಣ‌ಉಪ್ಪಾರ್, ಜಗದೀಶ್, ರಮೇಶ್, ಕುಮಾರ್, ದ್ವಾರಕೇಶ್, ಹನುಮಂತು ಮುಂತದವರಿದ್ದರು.

  • ಯುನುಸ್, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!