ನೀರಿನಲ್ಲಿ ಮುಳುಗುತ್ತಿದ್ದ ರಿಕ್ಷಾ ಮತ್ತು ಚಾಲಕನ ರಕ್ಷಣೆ

ಅಥಣಿ : ನೀರಿನ ಸೆಳೆತಕ್ಕೆ ಸಿಲುಕಿದ ಆಟೋರಿಕ್ಷಾ ಹಾಗೂ ಚಾಲಕನನ್ನು ಗ್ರಾಮಸ್ಥರು ಸೇರಿ ರಕ್ಷಿಸಿದ ಘಟನೆ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

ಕೃಷ್ಣಾನದಿ ಪ್ರವಾಹದಿಂದ ಅತಿ ಹೆಚ್ವು ನೀರಿನ ಪ್ರದೇಶದಲ್ಲಿ ಚಾಲಕನು ಆಟೋರಿಕ್ಷಾ ನಿಯಂತ್ರಿಸಲು ಸಾಧ್ಯವಾಗದೆ ಉರುಳಿಬಿದ್ದಿದೆ.

ಇಂಗಳಗಾಂವ ಗ್ರಾಮದ ಬಾಳು ಚನ್ನಣ್ಣವರ ಎಂಬ ಆಟೋ ಚಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದ್ದು ನದಿಯಲ್ಲಿ ರಿಕ್ಷಾ ಮುಳುಗುತ್ತಿದ್ದ ವೇಳೆ ಚಾಲಕ ರಿಕ್ಷಾ ಮೇಲೆ ಏರಿ ಕುಳಿತು ರಕ್ಷಣೆಗೆ ಕೂಗಾಡಿದ್ದನು.

ಈ ಸಂದರ್ಭದಲ್ಲಿ ಸ್ಥಳೀಯರು ಒಟ್ಟುಗೂಡಿ ಹಗ್ಗಗಳ ಸಹಾಯದಿಂದ ಆಟೋ ಚಾಲಕನನ್ನು ರಕ್ಷಿಸಿ ಆಟೋವನ್ನು ಸಹ ದಡ ಸೇರಿಸುವಲ್ಲಿ ಯಶಸ್ವಿಯಾದರು.

  • ವಿಲಾಸ ಕಾಂಬಳೆ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!