ನಾಯಿಯೊಂದಿಗೆ ಫ್ರೆಂಡ್‌ಶಿಪ್ : ಬ್ಯಾಂಡ್ ಕಟ್ಟಿ ಶುಭಾಶಯ ಕೋರಿದ ಮಕ್ಕಳು

ದಾವಣಗೆರೆ : ದೇಶಾದ್ಯಂತ ಇಂದು ಸ್ನೇಹಿತರ ದಿನಾಚರಣೆ ಆಚರಣೆ ಮಾಡಿಕೊಳ್ಳುತ್ತಿದ್ದು ಸ್ನೇಹಿತರು ಪರಸ್ಪರ ಬ್ಯಾಂಡ್ ಕಟ್ಟಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಆದ್ರೆ ದಾವಣಗೆರೆಯ ಕೆಲ ಪುಟ್ಟ ಮಕ್ಕಳು ವಿನೂತನವಾಗಿ ಸ್ನೇಹಿತರ ದಿನಾಚರಣೆ ಆಚರಿಸಿದ್ದಾರೆ.

ಹೌದು, ದಾವಣಗೆರೆಯ ಕೆಬಿ ಬಡಾವಣಗೆರೆಯ ಸೋನಿ ಎನ್ನುವ ಸಾಕು ನಾಯಿಗೆ ಪ್ರೇಂಡ್ ಶಿಪ್ ಬ್ಯಾಂಡ್ ಕಟ್ಟಿ ಮಕ್ಕಳು ಶುಭಾಶಯ ತಿಳಿಸಿದ್ರು.

ಸೋನು ಕೆಬಿ ಬಡಾವಣೆಯಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರವಾದ ನಾಯಿಯಾಗಿದ್ದು ಪ್ರತಿಯೊಬ್ಬರ ಬಳಿ ಸ್ನೇಹಮಯವಾಗಿ ಇರುತ್ತದೆ. ಆದ್ದರಿಂದ ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರ ದಿನಾಚರಣೆ ಆಚರಣೆ ಮಾಡಿಕೊಳ್ಳಬೇಕು ಎಂದು ವಿನೂತನವಾಗಿ ಮಕ್ಕಳು ಹಾಗೂ ನಾಯಿ ಮಾಲಿಕ ನಾಗಭೂಷಣ್ ಸೇರಿಕೊಂಡು ಸೋನು ನಾಯಿಯ ಕೈಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನಾಚರಣೆ ಆಚರಣೆ ಮಾಡಿ ಸಂಭ್ರಮಿಸಿದರು.

ಕರಿಬಸವರಾಜು, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!