ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಡಿಸಿ ಭೇಟಿ : ಪರಿಶೀಲನೆ

ಚಿಕ್ಕೋಡಿ : ಮಹಾರಾಷ್ಟ್ರದ ಜಲಾಶಯಗಳಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಅಂದಾಜು 4 ಅಡಿಗಳಷ್ಟು ನೀರು ಏರಿಕೆ ಆಗುವ ಸಂಭವವಿದ್ದು,  ಕೃಷ್ಣಾ ನದಿ ಭಾಗದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂತ್ರಸ್ತರ ಜಿಲ್ಲಾಡಳಿತವು ರಕ್ಷಣಾ ಸಾಮಗ್ರಿಗಳೊಂದಿಗೆ ತಂಡಗಳನ್ನು ರಚಿಸಿ ಸಿದ್ಧತೆಯಲ್ಲಿಟ್ಟುಕೊಂಡಿದ್ದು, ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ನದಿಗಳ ಪಾತ್ರಗಳಲ್ಲಿರುವ ಜನರು ತಮ್ಮ ಅಗತ್ಯ ಸಾಮಗ್ರಿಗಳೊಂದಿಗೆ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದರು.

ಮಾಂಜರಿ ಸೇತುವೆ ಭೇಟಿ ನೀಡಿದ ಅವರು ನೀರಿನ ಮಟ್ಟ ಪರಿಶೀಲಿಸಿದರು. ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದರ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಜನರ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ 

ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ನಿಂದ ಅಪಾರ ಪ್ರಮಾಣ ದ ನೀರು ಬಿಡುಗಡೆ. ಬೆಳಗಾವಿ ಜಿಲ್ಲಾಡಳಿತ ಪ್ರಕಟನೆ ಹೋರಡಿಸಿದ್ದಾರೆ. ನದಿಯ ತೀರದ ಜನರು ಸುರಕ್ಷೀತ ಸ್ಥಳಕ್ಕೆ ಹೋಗಬೇಕೆಂದು ತಿಳಿಸಿದ್ದಾರೆ.

  • ಆನಂದ ಕೋಳಿಗುಡ್ಡೆ, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!