ಮುಳಬಾಗಿಲು/ಬಂಗಾರಪೇಟೆ : ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ

ಕೋಲಾರ : ಜಿಲ್ಲೆಯ ಮುಳಬಾಗಿಲು ನಗರ ಹಾಗೂ ಬಂಗಾರಪೇಟೆ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ನ್ಯಾಯಾಲಯ ಕಟ್ಟಡದ ಉದ್ಘಾಟನೆ ಇಂದು ಮಾಡಲಾಯಿತು.

ಮುಳಬಾಗಿಲು ನಗರದಲ್ಲಿ ಸುಸಜ್ಜಿತ ವಾಗಿ ನಿರ್ಮಾಣ ಮಾಡಿರುವ ನೂತನ ಹೈಕೋರ್ಟ್​ ಮಾದರಿಯ ಕಟ್ಟಡವನ್ನು ಹಾಗೂ ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣ ಮಾಡಿದ್ದ ನ್ಯಾಯಾಲಯದ ಕಟ್ಟಡವನ್ನು ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಅಭಯ್​ ಶ್ರೀನಿವಾಸ್​ ಇಂದು ಲೋಕಾರ್ಪಣೆ ಮಾಡಿದ್ರು.

ಈ ವೇಳೆ ನಿವೃತ್ತ ನ್ಯಾಯಾಧೀಶರಾದ ಬಿ.ವೀರಪ್ಪ, ಮತ್ತು ಎಂ.ಕೆ.ಸುಧೀಂದ್ರರಾವ್​, ಪ್ರಕಾಶ್ ಶಾಸ್ತ್ರಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಉಪಸ್ಥಿತರಿದ್ರು ಜೊತೆಗೆ ಕೋಲಾರ ಜಿಲ್ಲೆಯ ವಿವಿದ ನ್ಯಾಯಾಲಯಗಳ ನ್ಯಾಯಾಧೀಶರು, ನೂರಾರು ಸಂಖ್ಯೆಯಲ್ಲಿ​ ವಕೀಲರು, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ರು.

ಲಕ್ಷ್ಮೀಪತಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!