ನೂತನ ಸಿಎಂ ಬಿಎಸ್ವೈಗೆ ಎಚ್ಡಿಕೆ, ಡಿಕೆಶಿ ಟಾಂಗ್

ಬೆಂಗಳೂರು : ವಿಶ್ವಾಸಮತ ಯಾಚನೆಯಲ್ಲಿ ತೇಋಗಡೆ ಹೊಂದಿದ ಸಿಎಂ ಬಿಎಸ್.ಯಡಿಯೂರಪ್ಪ ಅವರಿಗೆ ಸದನದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
ಸದನದಲ್ಲಿ ಎಚ್.ಡಿ.ಕೆ ಮಾತನಾಡುತ್ತಾ ರಾಜ್ಯದಲ್ಲಿ ಬಿಜೆಪಿ ಪ್ರಧಾನಿ ಮೋದಿಯವರಿಂದ ಅಥವಾ ಅಮಿತ್ಷಾ ಅವರಿಂದ ಅಧಿಕಾರ ಹಿಡಿದಿಲ್ಲ. ಬದಲಾಗಿ ಕುತಂತ್ರದಿಂದ ಅಧಿಕಾರ ಹಿಡಿದಿದೆ ಎಂದು ಟಾಂಗ್ ನೀಡಿದರು.

ಬಿಜೆಪಿ ನಾಯಕರು ಇನ್ನೂ ಕೆಲವು ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಇದು ನಮಗೆ ಚೆನ್ನಾಗಿ ಗೊತ್ತಿದೆ. ಈ ಪ್ರಯತ್ನವನ್ನು ನಿಲ್ಲಿಸಬೇಕು. ನಾವು ಅಧಿಕಾರದಲ್ಲಿದ್ದಾಗಲೂ ರಾಜ್ಯದ ಜನರ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಈಗಲೂ ಜನರ ಪರವಗಿ ಇದ್ದು ಕೆಲಸ ಮಾಡುತ್ತೇವೆ. ಯಾವುದೇ ರಾಹಿ ಮುಲಾಜಿಗೆ ಸಿಲುಕುವ ಮಾತೇ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದರು.
ಇನ್ನು ಸುದ್ದಿಗಾರರೊಡನೆ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ ಸಿಎಂ ಬಿಎಸ್.ಯಡಿಯೂರಪ್ಪ ಅವರಿಗೆ ಒಂದು ಸಲಹೆ ನೀಡುತ್ತೇನೆ ಎಂದು ಹೇಳಿ, ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಕೈಬಿಡಬೇಡಿ ಎಂದು ವ್ಯಂಗವಾಡಿದರು.

ಮುಂಚೆಯೇ ಹೇಳಿದ್ರಲ್ಲಾ ಅದನ್ನೆಲ್ಲಾ ಅವರಿಗೆ ಕೊಟ್ಟುಬಿಡಿ. 15-16 ಜನ ನಿಮ್ಮರಕ್ಷಣೆ ಮಾಡಿದ್ದಾರೆ. ಅವರನ್ನು ನೀವು ರಕ್ಷಣೆ ಮಾಡಿ. ಯಾವುದೇ ಕಾರಣಕ್ಕೂ ಅವರನ್ನು ತಬ್ಬಲಿ ಮಾಡಬೇಡಿ ಎಂದು ವ್ಯಂಗವಾಗಿ ಹೇಳಿದರು.