ದೊಡ್ಡಮ್ಮ ದೇವಿಯ ಪವಾಡ ಕಣ್ತುಂಬಿಕೊಂಡ ಭಕ್ತರು

ಕೋಲಾರ : ಬೇಡಿದ ವರಕ್ಕೆ ತಕ್ಷಣವೇ ಉತ್ತರಿಸುವ ದೊಡ್ಡಮ್ಮ ದೇವರಿಂದ ಹಲವು ಭಕ್ತರು ತಮ್ಮ ಕೊರಿಕೆ ಸಂಕಲ್ಪ ಮಾಡಿ ದೇವಿಯ‌ ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರರಾದರು.

ಹೌದು ಇಂಥಹ ದೊಂದು ಪವಾಡ ಕೋಲಾರ ನಗರದ ಕಾರಂಜಿ ಕಟ್ಟೆ ಎರಡನೇ ಕ್ರಾಸ್ ಬಳಿ ಆಟದ ಮೈದಾನದಲ್ಲಿ ದೊಡ್ಡಮ್ಮ ದೇವರ ಆರಾಧನೆ ವೇಳೆ ದೇವಿಯ ಪವಾಡ ಜನರು ಕಣ್ಣು ತುಂಬಿ ಕೊಂಡರು.

ಕೋಲಾರ ಪ್ರಸಿದ್ಧ ಅಂತರಗಂಗೆ ಶಿವ ದೇವಾಲಯದ ಅರ್ಚಕರು ತಮ್ಮ ಕುಟುಂಬದ ಬೇಡಿಕೆ ಈಡೇರಿಕೆಯ ಫಲವಾಗಿ ಇಂದು ದೊಡ್ಡಮ್ಮ ದೇವಿಯನ್ನು ಮನೆಯಲ್ಲಿ ಆರಾಧನೆ‌ಮಾಡಿ ಉತ್ಸವ ಮೂರ್ತಿಯನ್ನು ಆರಾಧಿಸಲಾಯಿತು.

ದೇವಿಗೆ ವಿಶೇಷ ಪೂಜೆ ಮಾಡಿ ಹರಕೆ ಕುರಿಯನ್ನು ದೇವಿಗೆ ಬಲಿ ನೀಡಿ ಪೂಜಿಸಲಾಯಿತು. ಭಕ್ತ ಬಂದು ದೇವಿಗೆ ಪೂಜೆ ಮಾಡಿ ತಮ್ಮ ಹರಕೆಗೆ ಉತ್ತರ ಬೇಡಿದರು. ಉತ್ಸವ ದೇವಿ ಮೂರ್ತಿ ವೇಗವಾಗಿ ಬಲಕ್ಕೆ ತಿರುಗಿದರೆ ಶೀಘ್ರವಾಗಿ ಫಲ ಸಿಗುತ್ತದೆ ಎಂದು, ಎಡಕ್ಜೆ ತಿರುಗಿದ್ರೆ ಇಲ್ಲ ಎಂತಲೂ, ನಿದಾನವಾಗಿ ವಿಳಂಬ ಮಾಡಿ ತಿರುಗಿದ್ರೆ ಹರಕೆ ನಿಧಾನವಾಗಿ ಈಡೇರುತ್ತದೆ ಎಂದು ಅರ್ಥ.

ಹೀಗಾಗಿ ಸಾಕಷ್ಟು ಭಕ್ತರು ಆಗಮಿಸಿ ದೇವಿಯ ಬಳಿ ಹರಕೆಗೆ ಉತ್ತರ ಪಡೆದು ಹೋಗಿದ್ದಾರೆ.
ಉತ್ಸಾವ ಮೂರ್ತಿ ಭಕ್ತರಿಗೆ ಉತ್ತರ ನೀಡುವ ಪರಿ ಎಲ್ಲರನ್ನು ಬೆರಗು ಗೊಳಿಸುತ್ತದೆ….ಬೆಳಿಗ್ಗೆ ಯಿಂದಲೇ ದೇವಿ ಪೂಜೆ ಸಲ್ಲಿಸಿ ಸಂಜೆ ದೇವಾಲಯಕ್ಕೆ ದೇವಿಯ ಒಡಲು ತುಂಬಿ ಕಳುಹಿಸದರು…..ಈ‌ಪೂಜೆ ವೇಳೆ‌ ಸಸ್ಯಾಹಾರ,ಹಾಗೂ ಮಾಂಸಾಹಾರ ಊಟದ ವ್ಯವಸ್ಥೆ ಮಾಡಿ ಭಕ್ತರು ಆಗಮಿಸಿ ದೇವಿ ಪ್ರಸಾದ ಸ್ವೀಕರಿಸಿದರು.

ಲಕ್ಷ್ಮೀಪತಿ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!