ಒಂದೇ ಕಾಮಗಾರಿಗೆ ಎರಡೆರಡು ಬಾರಿ ಚಾಲನೆ

ಬೆಳಗಾವಿ : ಕಾಂಗ್ರೆಸ್ – ಬಿಜೆಪಿ ನಾಯಕರ ಬಹಿರಂಗ ಗುದ್ದಾಟ ಬೆಳಕಿಗೆ ಬಂದಿದ್ದು, ಒಂದೇ ಕಾಮಗಾರಿಗೆ ಎರಡೆರಡು ಬಾರಿ ಚಾಲನೆ ಕೊಟ್ಟದ್ದು ಗಮನಾರ್ಹ.

ಒಂದೇ ದಿನ ಒಂದೇ ಕಾಮಗಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠ ನಾಯಕರು ಪ್ರತ್ಯೇಕವಾಗಿಯೇ ಚಾಲನೆ ನೀಡಿದ್ದಾರೆ.

ನಗರದ ಎಪಿಎಂಸಿ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಂಜಾನೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದ್ದರೆ. ಇದಾದ ಕೆಲವೇ ತಾಸುಗಳ ನಂತರ ಇದೇ ಕಾಮಗಾರಿಗೆ ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ಅನಿಲ್ ಬೆನಕೆ ಸಹ ಮರು ಚಾಲನೆ ನೀಡಿದ್ದಾರೆ.

ಇದನ್ನು ಜನಪ್ರತಿನಿಧಿಗಳ ಮುಸುಕಿನ ಗುದ್ದಾಟ ಎಂಬ ಅಭಿಪ್ರಾಯಕ್ಕಿಂತ ಬಹಿರಂಗ ಯುದ್ದ ಎಂದು ಬಣ್ಣಿಸಲಾಗಿದೆ. ಈ ಮಧ್ಯೆ ಸರ್ಕಾರಿ ಅಧಿಕಾರಿಗಳು ತೀವ್ರ ಪೇಚಿಗೆ ಸಿಲುಕಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಶೇ.95 ರಷ್ಟು ಹಾಗೂ ಎಪಿಎಂಸಿಯಿಂದ ಶೇ.5 ರಷ್ಟು ಅನುದಾನದಲ್ಲಿ ಬಿಗುಗಡೆಗೊಂಡಿದೆ ಎನ್ನುವುದು ಗಮನಾರ್ಹ.

  • ಫಿರೋಜ್, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!