ವಿದ್ಯುತ್ ತಂತಿ ತಗುಲಿ ಇಬ್ಬರು ಸಾವು : ಇಬ್ಬರು ಗಂಭೀರ

ಮುಳಬಾಗಿಲು : ವಿದ್ಯುತ್ ಕೆಲಸದಲ್ಲಿ ನಿರತರಾಗಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತಿಬ್ಬರು ಗಂಭೀರಗೊಂಡ ಘಟನೆ ತಾಲ್ಲೂಕಿ‌ನ ವಿರೂಪಾಕ್ಷ ಗ್ರಾಮದ ಬಳಿ ನಡೆದಿದೆ.

ಆಂದ್ರ ಮೂಲದ ರಾಜಬಾಬು (35) ಹಾಗೂ ಚಿನ್ನಿಬಾಬು(28) ಮೃತಪಟ್ಟ ಕಾರ್ಮಿಕರು. ವಿದ್ಯುತ್ ತಂತಿ ತಗುಲಿ ಒದ್ದಾಡುತ್ತಿದ್ದ ಕಾರ್ಮಿಕರನ್ನು ರಕ್ಷಿಸಲು ಹೋದ ಮತ್ತಿಬ್ಬರಿಗೂ ವಿದ್ಯುತ್ ತಗುಲಿ ಗಂಭೀರ ಸ್ಥೀತಿಗೆ ತಲುಪಿದ್ದು ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ‌ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!