ಮೂವರು ಅತೃಪ್ತ ಶಾಸಕರು ಅನರ್ಹ : ಸ್ಪೀಕರ್ ಆದೇಶ

ಸ್ಪೀಕರ್ ರಮೇಶ್‌ಕುಮಾರ್

ಬೆಂಗಳೂರು : ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ರಾಣಿಬೆನ್ನೂರು ಶಾಸಕ ಆರ್.ಶಂಕರ್ ಇವರುಗಳನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಅನರ್ಹಗೊಂಡ ಗೋಕಾಕ್ ಶಾಸಕ ರಮೇಶ್‌ಜಾರಕಿಹೊಳಿ

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೂವರು ಶಾಸಕರನ್ನಿ ಅನರ್ಹಗೊಳಿಸಿರುವುದಾಗಿ ತಿಳಿಸಿದ್ದಾರೆ.

ದೋಸ್ತಿ ಸರ್ಕಾರದಿಂದ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರುಗಳ ಪೈಕಿ ಮೂವರು ಶಾಸಕರನ್ನು 2023 ಮೇ ತಿಂಗಳವರೆಗೆ ಅನರ್ಹಗೊಳಿಸಿ ಸ್ಪೀಕರ್ ಆದೇಶ ನೀಡಿದ್ದಾರೆ.

ಅನರ್ಹಗೊಂಡ ರಾಣಿಬೆನ್ನೂರ್ ಶಾಸಕ ಆರ್.ಶಂಕರ್

ಒಟ್ಟು ಮೂರು ವರ್ಷ ಹತ್ತು ತಿಂಗಳುಗಳವರೆಗೆ ಅನರ್ಹಗೊಳಿಸಲಾಗಿದೆ. ಇನ್ನುಳಿದ ಅತೃಪ್ತ ಶಾಸಕರ ವಿಚಾರದಲ್ಲಿ ಪ್ರತಿಕ್ರಯಿಸಿದ ಸ್ಪೀಕರ್ ಉಳಿದವರ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮಯ ಬೇಕು. ಈಗಲೇ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜೀನಾಮೆ ನೀಡಿರುವ ಉಳಿದ ಶಾಸಕರ ನಡವಳಿಕೆ ಹಾಗೂ ನಮ್ಮ ಮುಂದೆ ನಡೆದ ಘಟನೆಗಳು, ಕಾನೂನು ಏನು ಹೇಳುತ್ತವೆ ಎಂಬುದು ಮುಖ್ಯ. ಅಲ್ಲದೇ ಶಾಸಕರ ರಾಜೀನಾಮೆ ವಿಚಾರದಲ್ಲಿ ತಮಿಳುನಾಡು, ಮಧ್ಯಪ್ರದೇಶದಲ್ಲಿ ಏನು ತೀರ್ಪು ಬಂದಿದೆ ಎಂಬುದನ್ನು ನೋಡಬೇಕಿದೆ. ಹಿಂದೆ ರಾಜ್ಯಪಾಲರು, ನ್ಯಾಯಾಲಯಗಳ ತೀರ್ಮಾನ ಏನಿತ್ತು ಎಂಬುದನ್ನು ಓದಿ ನಂತರ ತಮ್ಮ ತೀರ್ಮಾನ ಪ್ರಕಟಗೊಳಿಸುವಂತೆ ತಿಳಿಸಿದರು.

ಅನರ್ಹಗೊಂಡ ಅಥಣಿ ಶಾಸಕ ಮಹೇಶ್‌ಕುಮಟಳ್ಳಿ

ಇನ್ನು ಅನರ್ಹಗೊಂಡಿರುವ ಶಾಸಕರುಗಳು ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.

ಆದರೆ ಈ ಹಿಂದೆ ತಮಿಳುನಾಡಿನಲ್ಲಿ ಅನರ್ಹಗೊಂಡಿದ್ದ ಶಾಸಕರು ಮಧ್ಯಂತರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ್ದರು‌. ಹಾಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿರುವುದು ಹೊಸ ರೀತಿಯ ವ್ಯಾಖ್ಯಾನ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅನರ್ಹಗೊಂಡಿರುವ ಶಾಸಕರು ನ್ಯಾಯಾಲಯದ ಮೊರೆ ಹೋಗುತ್ತಾರೆಂದು ಹೇಳಲಾಗುತ್ತಿದೆ.

  • ಯುನುಸ್, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!