ನಕಲಿ ರಾಜೀನಾಮೆ ಪ್ರತಿ ಸೃಷ್ಟಿ, ಸಿಎಂ ಎಚ್‌ಡಿ‌ಕೆ ಹೊಸ ಬಾಂಬ್

ಬೆಂಗಳೂರು : ವಿಶ್ವಾಸ ಮತಯಾಚನೆ ಸರ್ಕಸ್‌ ನಡುವೆ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಾನು ರಾಜಿನಾಮೆ ಕೊಡುವ ಮುನ್ನ ನನ್ನ ಹೆಸರಿನ ನಕಲಿ ರಾಜೀನಾಮೆ ಪ್ರತಿ ತಯಾರಿಸಲಾಗಿದೆ. ಅದಕ್ಕೆ ನನ್ನ ನಕಲಿ ಸಹಿ ಮಾಡಿ ವಾಟ್ಸಪ್‌ನಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು.

ಅಲ್ಲಿ ತನಕ ನಾನು ವಿಶ್ವಾಸಮತ ಮಂಡನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಸಿಎಂ, ನಮಗೆ ಎರಡು ದಿನ ಕಾಲವಾಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಸಿಎಂ ಎಚ್‌ಡಿ‌ಕೆ ರಾಜೀನಾಮೆ ಪ್ರತಿಯನ್ನು ಮಾಧ್ಯಮಗಳಿಗೆ ಕಾಣುವಂತೆ ಪರೋಕ್ಷವಾಗಿ ತೋರಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!